ದೀಪಗಳ ಹಬ್ಬ ದೀಪಾವಳಿ

0
3
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಾಣರ ಗುರು ವಿದ್ಯಾರ್ಥಿ ಸಂಚಿಕೆಗೆ ಧಾರವಾಡದ ಶಿಕ್ಷಕರಾದ ರಂಗನಾಥ ಎನ್ ವಾಲ್ಮೀಕಿ ಬರೆದ ಲೇಖನ ದೀಪಗಳ ಹಬ್ಬ ದೀಪಾವಳಿ

ರಂಗನಾಥ ಎನ್ ವಾಲ್ಮೀಕಿ

ಹಬ್ಬಗಳ ಆಚರಣೆ ಕೇವಲ ಸಂಭ್ರಮ ಪಡುವದಷ್ಟೆ ಅಲ್ಲ ಆ ಮೂಲಕ ಕೆಲವು ಬದುಕಿನ ಸೂತ್ರಗಳನ್ನು ತಿಳಿದು ಉತ್ತಮ ಬದುಕನ್ನು ನಿರ್ವಹಿಸುವುದು ಆಗಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ದ್ಯೋತಕ. ಹಬ್ಬಗಳ ನೆಪದಲ್ಲಿ ನಾವೆಲ್ಲರೂ ಒಂದೆಡೆ ಸೇರುತ್ತೇವೆ. ಖುಷಿ ಪಡುತ್ತೇವೆ. ಒಟ್ಟಾಗುತ್ತೇವೆ. ಸಂತೋಷದಿಂದ ಕಾಲ ಕಳೆಯುತ್ತೇವೆ.

ಬದುಕಿನಲ್ಲಿ ಉತ್ಸಾಹ ಹೆಚ್ಚಿಸಿಕೊಳ್ಳುತ್ತೇವೆ. ಜೊತೆಗೆ ಬದುಕಿನ ಸಂದೇಶ ತಿಳಿಯುತ್ತೇವೆ. ಹಬ್ಬಗಳಲ್ಲಿ ಹಲವಾರು ಹಬ್ಬಗಳು ಇದ್ದರೂ ದೀಪಾವಳಿ ಹಬ್ಬವನ್ನು ಸರ್ವರೂ ಸೇರಿ ಆಚರಿಸುವ ಹಬ್ಬವಾಗಿದೆ. ಸಾಮಾನ್ಯ ಅರ್ಥದಲ್ಲಿ ಬೆಳಕು ಅಂದರೆ ಸುಜ್ಞಾನದ ಸಂಕೇತ ದೀಪಾವಳಿಯಂದು ನಾವು ಮನೆಯಲ್ಲಿ ಬೆಳಗುವ ದೀಪದ ಬೆಳಕು ನಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜಾಗೃತಿಯ ಬೆಳಕನ್ನು ಹೆಚ್ಚಿಸಬೇಕು.

ನಮ್ಮ ಮನದಲ್ಲಿರುವ ಕ್ರೋಧ, ಅಸೂಯೆ, ಮದ, ಮತ್ಸರ ಇತರ ಅರಿಷಡ್ವರ್ಗಗಳನ್ನು ದೂರ ಮಾಡಿ ಶಾಂತಿಯುತ ಆದರ್ಶ ಬದುಕಿಗೆ ಪ್ರೇರಣೆ ನೀಡುವಂತಾಗಬೇಕು. ಸತ್ಯ, ನ್ಯಾಯ, ನೀತಿ, ಆದರ್ಶಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಈ ಹಬ್ಬ ನಮಗೆ ಪ್ರೇರಣೆ ನೀಡಲಿ. ದೀಪಾವಳಿಯಂದು ವಿವಿದೆಡೆ ವಿವಿಧ ರೀತಿ ಆಚರಣೆ ಸಂಸ್ಕೃತಿ ಸಂಸ್ಕಾರಗಳನ್ನು ಕಾಣುತ್ತೇವೆ. ಅವು ಅಗತ್ಯ ಕೂಡಾ. ಹಬ್ಬದ ನೆಪದಲ್ಲಿ ಮನೆಯನ್ನು ಸಿಂಗರಿಸುತ್ತೇವೆ.

ಇದರ ಜೊತೆಗೆ ಮನಗಳನ್ನು ಶುದ್ದಿಕರಣಗೊಳಿಸುವುದು ಇಂದಿನ ಅಗತ್ಯವಾಗಿದೆ. ಅಂದರೆ ನಾವು ಯಾರನ್ನು ದ್ವೇಷಿಸದೇ ಸರ್ವರ ಜೊತೆಗೂಡಿ ಸಹಕಾರದ ತತ್ವ ರೂಢಿಸಿಕೊಂಡು ಉತ್ತಮ ರೀತಿಯಲ್ಲಿ ನಡೆಯುವುದು ಇಂದಿನ ಅಗತ್ಯವಾಗಿದೆ. ಇನ್ನು ಅಂದು ಮನೆ ಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟು ಆನಂದದಿಂದ ಖುಷಿ ಪಡುವರು. ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಎನ್ನ ಕಾಲೇ ಕಂಬ ಎನ್ನ ದೇಹವೇ ದೇಗುಲ ಎನ್ನ ಶಿರವೇ ಹೊನ್ನ ಕಳಸವಯ್ಯ ಎಂಬ ವಚನಕಾರರ ಮಾತು ಇಲ್ಲಿ ಸ್ಮರಿಸಬಹುದು ಕಾರಣ ಬಡವರು ಮಧ್ಯಮ ವರ್ಗದವರು ತಮ್ಮ ಶಕ್ತಾನುಸಾರ ಹಬ್ಬ ಆಚರಿಸಿದರೆ ಉಳ್ಳವರು ಬಹಳ ಅದ್ದೂರಿಯಾಗಿ ಆಚರಿಸುವರು.

ಇಲ್ಲಿ ಭಾವ ಮುಖ್ಯ ಎನ್ನುವುದು ಮುಖ್ಯ. ಇನ್ನು ಬಲಿಪಾಡ್ಯ ನರಕ ಚತುದರ್ಶಿ ಹಬ್ಬದಂದು ಹಲವಾರು ಪೂಜೆ ಪುನಸ್ಕಾರಗಳು ಜರುಗುತ್ತವೆ. ಇವುಗಳಿಗೆ ಐತಿಹಾಸಿಕ ಹಿನ್ನಲೆ ಇರುವುದು ನಾವು ಇಲ್ಲಿ ಕಾಣಬಹುದು, ಹಬ್ಬಗಳು ನಮಗೆ ಸಂತಸ ತರುವುದರ ಜೊತೆಗೆ ಕಲಿಕೆಯನ್ನು ಉಂಟು ಮಾಡಬೇಕು ಅಲ್ಲವೇ? ಹಬ್ಬದ ಆಚರಣೆಯ ನೆಪದಲ್ಲಿ ದುಖವನ್ನು ನೋವನ್ನು ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳಬಾರದು ಅಲ್ಲವೇ? ದೀಪಾವಳೀ ಹಬ್ಬ ಎಂದರೆ ಪಟಾಕಿ ಹಾರಿಸುವುದು ಇತ್ತೀಚಿನ ರೂಢಿ ಆಗಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಹಾರಿಸುವರು. ಪಟಾಕಿ ಹಾರಿಸುವಾಗಿ ಎಚ್ಚರಿಕೆ ಅಗತ್ಯ. ಮಕ್ಕಳಿಗೆ ಪಟಾಕಿ ಕೊಡುವಾಗಿ ಹೆಚ್ಚು ಅಪಾಯಕಾರೀ ಅಲ್ಲದ ಪಟಾಕಿ ನೀಡಬೇಕು. ಪಟಾಕಿ ಹಾರಿಸುವಾಗಿ ಅದು ಕಣ್ಣುಗಳಿಗೆ ಸಿಡಿದು ಅನೇಕ ಮಕ್ಕಳು ಕಣ್ಣು ಕಳೆದುಕೊಂಡ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದುತ್ತೇವೆ. ಈ ರೀತಿಯ ಘಟನೆಗಳನ್ನು ಸಂಭವಿಸದಂತೆ ಎಚ್ಚರಿಕೆ ಅಗತ್ಯ. ದೀಪಗಳ ಹಬ್ಬ ದೀಪಾವಳಿ ಸರ್ವರ ಬದುಕಿಗೆ ಸಂತಸ ನೀಡಿ ಹೊಸ ನವ ನವೀನ ಜೀವನ ನಡೆಸಲು ಪ್ರೇರಣೆ ನೀಡುವಂತಾಗಲಿ.

Previous articleಬಾಲಿವುಡ್‌ಗೆ ಸಮಾನ ಸ್ಪರ್ಧಿಯಾಗಿರುವ ಚಂದನವನಕ್ಕೆ DK ಅಭಯ

LEAVE A REPLY

Please enter your comment!
Please enter your name here