ಹೊಸಪೇಟೆ: ಆಟೋ-ಲಾರಿ ನಡುವೆ ಭೀಕರ ಅಪಘಾತ

0
17

ವಿಜಯನಗರ: ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರೀಡ್ಜ್ ಬಳಿ ಎರಡು ಆಟೋಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, 6 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ಮೃತಪಟ್ಟವರು ಬಳ್ಳಾರಿಯ ಗೌತಮ್ ನಗರದ ನಿವಾಸಿಗಳೆಂದು ತಿಳಿದುಬಂದಿದೆ. ಬಳ್ಳಾರಿಯಿಂದ ಎರಡು ಆಟೋದಲ್ಲಿ 19 ಜನರು ತುಂಗಭದ್ರಾ ಡ್ಯಾಮ್​ಗೆ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Previous articleಸ್ವಯಂಘೋಷಿತ ಆರ್ಥಿಕ ತಜ್ಞರೇ 15Kg ಅಕ್ಕಿ ಯಾವಾಗ ಕೊಡ್ತೀರಿ?
Next articleನದಿಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ದುರ್ಮರಣ