ಕುಷ್ಟಗಿ: ಪಟ್ಟಣದ ಗೊಲ್ಲರ ಓಣಿಯ ಮಹಿಳೆ ಹೊಟ್ಟೆ ನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಟ್ಟಣದ 10ನೇ ವಾರ್ಡಿನ ಗೊಲ್ಲರ ಓಣಿಯ ಯಾದವ ಸಮಾಜದ ಪಾರಮ್ಮ ನಾಗಪ್ಪ ಕಟ್ಟಿಗೌಡ್ರು (36) ಕಳೆದ ಹಲವಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಸಾಕಷ್ಟು ಬಾರಿ ಚಿಕಿತ್ಸೆ ಕೊಡಿಸಿದರು ಸಹ ಚಿಕಿತ್ಸೆ ಫಲಕಾರಿ ಆಗಿರಲಿಲ್ಲ ಹೀಗಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಕುರಿತು ಕುಷ್ಟಗಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.