ಹುಬ್ಬಳ್ಳಿ, ಬೆಳಗಾವಿ ಮತ್ತು ವಾಸ್ಕೋದಿಂದ `ಉದ್ನಾ’ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಸಂಚಾರ

0
22

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಭಾರತೀಯ ರೈಲ್ವೆಯು ಬೆಳಗಾವಿ, ವಾಸ್ಕೋ-ಡ-ಗಾಮಾ ಮತ್ತು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದಿಂದ `ಉದ್ನಾ ನಿಲ್ದಾಣ’ಕ್ಕೆ ಏಕಮುಖ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳು ಜುಲೈ ೮ ರಂದು ಸಂಚರಿಸಲಿವೆ.

ನಿಯಮಿತ ರೈಲುಗಳಲ್ಲಿ ವಿಪರೀತ ರಶ್ ನಿಂದಾಗಿ ಅನಾನುಕೂಲತೆಯನ್ನು ಎದುರಿಸುತ್ತಿರುವ ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಹೆಚ್ಚು ಅನುಕೂಲತೆಯನ್ನು ಒದಗಿಸುತ್ತವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಬೆಳಗಾವಿಯಿಂದ ಉಧ್ನಾಕ್ಕೆ ವಿಶೇಷ ರೈಲು (೦೭೩೫೩) ಸಂಚಾರ
ಈ ವಿಶೇಷ ರೈಲು ಜುಲೈ ೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೆಳಗಾವಿಯಿಂದ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್, ಪಾಲ್ಘರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಮಧ್ಯ ರಾತ್ರಿ ೨:೪೫ ಕ್ಕೆ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್-೨, ಎಸಿ ತ್ರಿ ಟೈಯರ್-೨, ಸ್ಲೀಪರ್ ಕ್ಲಾಸ್-೧೦, ಜನರಲ್ ಸೆಕೆಂಡ್ ಕ್ಲಾಸ್-೪, ಎಸ್ ಎಲ್ ಆರ್ ಡಿ-೨ ಸೇರಿದಂತೆ ಒಟ್ಟು ೨೦ ಬೋಗಿಗಳನ್ನು ಒಳಗೊಂಡಿರುತ್ತದೆ.


ವಾಸ್ಕೋಡಗಾಮಾದಿAದ ಉಧ್ನಾಕ್ಕೆ ವಿಶೇಷ ರೈಲು (೦೭೩೫೭) ಸಂಚಾರ
ಈ ವಿಶೇಷ ರೈಲು ಜುಲೈ ೮ ರಂದು ಬೆಳಿಗ್ಗೆ ೧೦ ಗಂಟೆಗೆ ವಾಸ್ಕೋಡಗಾಮಾದಿಂದ ಹೊರಟು ಮಜೋರ್ಡಾ, ಮಡಗಾಂವ್, ಥಿವಿಮ್, ರತ್ನಾಗಿರಿ, ರೋಹಾ, ಪನ್ವೆಲ್, ಕಮಾನ್ ರೋಡ್, ವಸಾಯಿ ರೋಡ್ ಮತ್ತು ವಾಪಿ ನಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಬೆಳಿಗ್ಗೆ ೩.೩೦ ಕ್ಕೆ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್-೧, ಎಸಿ ತ್ರಿ ಟೈಯರ್-೨, ಸ್ಲೀಪರ್ ಕ್ಲಾಸ್-೧೦, ಜನರಲ್ ಸೆಕೆಂಡ್ ಕ್ಲಾಸ್-೩, ಎ???ಲ್ ಆರ್ ಡಿ-೧ ಸೇರಿದಂತೆ ಒಟ್ಟು ೧೭ ಬೋಗಿಗಳನ್ನು ಒಳಗೊಂಡಿರುತ್ತದೆ.

ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು (೦೭೩೫೯) ಸಂಚಾರ
ಈ ವಿಶೇಷ ರೈಲು ಜುಲೈ ೮ ರಂದು ರಾತ್ರಿ ೯. ೪೫ ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಲೋಂಡಾ, ಬೆಳಗಾವಿ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿರೋಡ್, ಪಾಲ್ಘರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ ೪:೦೦ ಗಂಟೆಗೆ ಉದ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್-೧, ಎಸಿ ತ್ರಿ ಟೈಯರ್-೩, ಸ್ಲೀಪರ್ ಕ್ಲಾಸ್-೮, ಜನರಲ್ ಸೆಕೆಂಡ್ ಕ್ಲಾಸ್-೩, ಎ???ಲ್ ಆರ್ ಡಿ-೨ ಸೇರಿದಂತೆ ಒಟ್ಟು ೧೭ ಬೋಗಿಗಳನ್ನು ಒಳಗೊಂಡಿರುತ್ತದೆ.

ಮುAಗಡ ಬುಕಿಂಗ್ ಮತ್ತು ವೇಳಾಪಟ್ಟಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ತಿತಿತಿ.eಟಿquiಡಿಥಿ.iಟಿಜiಚಿಟಿಡಿಚಿiಟ.gov.iಟಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ೧೩೯ ನಂಬರಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Previous articleಸಿದ್ಧಾರೂಢರ ಭಾವಚಿತ್ರ ಉಳ್ಳ ಅಂಚೆ ಚೀಟಿ ಬಿಡುಗಡೆ
Next articleಅಂಚೆ ಚೀಟಿ ಬಿಡುಗಡೆಯಿಂದ ಸಿದ್ಧಾರೂಢರ ಜೀವನ ಚರಿತ್ರೆ ಅರಿಯಲು ಸಹಾಯಕ