ಹಿರಿಯ ವಕೀಲ ಕೆ ಎನ್ ಪುಟ್ಟೇಗೌಡ ನಿಧನ: ಮೃತರ ಪಾರ್ಥಿವ ಶರೀರ ಆಸ್ಪತ್ರೆಗೆ ದಾನ

0
33

ಬೆಂಗಳೂರು : ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದ ಕೆ ಎನ್ ಪುಟ್ಟೇಗೌಡ (71) ವಿಧಿವಶರಾಗಿದ್ದಾರೆ.
ವಿಜಯನಗರದ ತಮ್ಮ ನಿವಾಸದಲ್ಲಿ ಬುಧವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಮೃತರ ಇಬ್ಬರು ಪುತ್ರಿಯರು ಮತ್ತು ಪತ್ನಿಯನ್ನು ಅಗಲಿದ್ದಾರೆ. ಬಿಡಿಎ, ಕೆಸ್​​ಆರ್​ಟಿಸಿ, ಕೃಷಿ ವಿವಿ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸರ್ಕಾರ ಹಾಗೂ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ರಾಜ್ಯಾದ್ಯಂತ ಹಲವಾರು ಕಡೆ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳಲ್ಲಿ ಸಾಕ್ಷಿ ಸಮೇತ ವಾದ ಮಂಡಿಸಿ ಉಳಿಸಿಕೊಟ್ಟ ಕೀರ್ತಿ ಪುಟ್ಟೇಗೌಡರಿಗೆ ಸಲ್ಲುತ್ತದೆ. ಮೃತರ ಪಾರ್ಥಿವ ಶರೀರವನ್ನು ಆದಿಚುಂಚನಗಿರಿ ಮಠಕ್ಕೆ ಅಥಾವ ಬಿಜಿಎಸ್ ಆಸ್ಪತ್ರೆಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Previous articleಲಂಚಕ್ಕೆ ಬೇಡಿಕೆ: ಗಣಿ ಇಲಾಖೆ ಉಪನಿರ್ದೇಶಕಿ ಸಹಿತ ಮೂವರು ಲೋಕಾಯುಕ್ತ ಬಲೆಗೆ
Next articleಪತ್ನಿಯನ್ನು ಮನಸೋ ಇಚ್ಛೆ ಕೊಲೆಮಾಡಿದ ಪತಿ