ಸತತ ಮಳೆಗೆ ಮನೆ ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ

0
16

ಧಾರವಾಡ : ಸತತ ಮಳೆಗೆ ಜಿಲ್ಲೆಯಲ್ಲಿ ವಿವಿಧ ಕಡೆ ಮನೆಗಳು ಬೀಳುತ್ತಿವೆ. ಆದರೆ, ಈವರೆಗೆ ಅವಘಡ ಸಂಭವಿಸಿರಲಿಲ್ಲ.
ಆದರೆ, ಶುಕ್ರವಾರ ರಾತ್ರಿ
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮನೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಯಲ್ಲಪ್ಪ ಇಟ್ಟಿ ಮೃತಪಟ್ಟ ವ್ಯಕ್ತಿ. ಮನೆ ಕುಸಿದು ಬಿದ್ದ ವೇಳೆ ಯಲ್ಲಪ್ಪ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಯಲ್ಲಪ್ಪ ಅವರ ಪತ್ನಿ ಹನುಮವ್ವ, ಪುತ್ರಿ ಯಲ್ಲವ್ವ ತೀವ್ರವಾಗಿ ಗಾಯಗೊಂಡಿದ್ದಾರೆ.

Previous articleಚಾರ್ಮಾಡಿ ಘಾಟಿ  ಪ್ರದೇಶದಲ್ಲಿ ಬಿದ್ದ ಮರ: ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ
Next articleಭೂ ಕುಸಿತ: ರೈಲು ಸಂಚಾರ ಸ್ಥಗಿತ, ವಿಜಯಪುರ – ಮಂಗಳೂರ ಎಕ್ಸಪ್ರೆಸ್ ಸಂಚಾರ ಮಾರ್ಗ ಬದಲು