ಸಚಿವರ ತೋಟಕ್ಕೂ ಬಂತು ಘಟಪ್ರಭಾ ನದಿ ಪ್ರವಾಹ

0
21

ಬಾಗಲಕೋಟೆ : ಘಟಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರವಾಹದ ಬಿಸಿ ತಟ್ಟಿದೆ.
ಸಚಿವ ಆರ್.ಬಿ. ತಿಮ್ಮಾಪುರ ಅವರ ಸ್ವಗ್ರಾಮ, ಮುಧೋಳ ತಾಲೂಕಿನ ಉತ್ತೂರಿನಲ್ಲಿ ಮನೆ,‌ ತೋಟ ಹೊಂದಿದ್ದು, ಅವರ ತೋಟಕ್ಕೂ‌ ಘಟಪ್ರಭಾ ನದಿ‌ ನೀರು ಆವರಿಸಿದೆ.
ತೋಟದಲ್ಲಿ ಬೆಳೆದ ಕಬ್ಬು ಸಹಿತ ವಿವಿಧ ಬೆಳೆಗಳು ನೀರಿನಲ್ಲಿ ನಿಂತಿದ್ದು, ಸಚಿವ ತಿಮ್ಮಾಪುರ‌ ಅವರು ಸಹೋದರನ‌ ಜತೆಗೆ ತೋಟಕ್ಕೆ ತೆರಳಿ ವೀಕ್ಷಿಸಿಸಿದರು.
ಸಚಿವರ ತೋಟದ ಸುತ್ತಮುತ್ತಲಿನ ತೋಟಗಳಿಗೂ ನೀರು‌ ನುಗ್ಗಿದ್ದು, ರೈತರ‌ ಹೊಲಗಳನ್ನೂ ಪರಿಶೀಲಿಸಿದರು.‌ ಪ್ರವಾಹದಿಂದ ‌ಆದ ಬೆಳೆ ಹಾನಿಯ‌ ಕುರಿತು ಸಮೀಕ್ಷೆ ನಡೆಸಲು‌ ಅಧಿಕಾರಿಗಳಿಗೆ‌ ಇದೇ ವೇಳೆ ಸೂಚಿಸಿದರು.

Previous articleಪ್ರತಿ ಠಾಣೆಯಿಂದ ೨೦ ಕ್ಕೂ ಅಧಿಕ ಮಾದಕ ವಸ್ತು ಬಳಕೆದಾರರು ವಶಕ್ಕೆ
Next articleಮೈಸೂರಿನ ವಿಜಯ್‌ ಶಂಕರ್‌ ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕ