ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರವೇ?

0
15
ಆರ್‌ ಅಶೋಕ್

ಬೆಂಗಳೂರು: ಕಾನೂನು ಉಲ್ಲಂಘಿಸಿ ವನ್ಯಜೀವಿ ಮಂಡಳಿಯಿಂದ ಅಧಿಕಾರೇತರ ಸದಸ್ಯರನ್ನು ಹೊರಗಿಟ್ಟುರುವುದು ನಾಡಿನ ಅಮೂಲ್ಯ ವನ್ಯ ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರವೇ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇರಳ ಸಂಸದ ರಾಹುಲ್ ಗಾಂಧಿ ಅಪ್ಪಣೆಯಂತೆ ಕನ್ನಡಿಗರ ದುಡಿಮೆಯ 15 ಲಕ್ಷ ರೂಪಾಯಿ ತೆರಿಗೆ ಹಣವನ್ನ ಕೇರಳಕ್ಕೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಗ ರಾಜ್ಯ ವನ್ಯಜೀವಿ ಮಂಡಳಿಯ ಅವಧಿ ಮುಗಿದ ನಂತರ ಹೊಸ ಮಂಡಳಿ ರಚಿಸದೆ ಕಾನೂನು ಬಾಹಿರವಾಗಿ ವನ್ಯಜೀವಿ ಸ್ಥಾಯಿಸಮಿತಿ ರಚಿಸಿಕೊಂಡು ಮನಬಂದಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ಕಾನೂನು ಉಲ್ಲಂಘಿಸಿ ವನ್ಯಜೀವಿ ಮಂಡಳಿಯಿಂದ ಅಧಿಕಾರೇತರ ಸದಸ್ಯರನ್ನು ಹೊರಗಿಟ್ಟುರುವುದು ನಾಡಿನ ಅಮೂಲ್ಯ ವನ್ಯ ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರವೇ?
ವನ್ಯಜೀವಿಗಳ ಮೇಲೆ, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಯೋಜನೆಗಳಿಗೆ ಅನುಮೋದನೆ ನೀಡಿಲು ಕಾನೂನಿನ ನಿಯಮ ಮೀರಿ ಸಭೆ ನಡೆಸಲು ಹೊರಟಿರುವ ತರಾತುರಿ ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವೆ ಅಡಗಿರುವ ಸಂದೇಹ ಮೂಡುತ್ತಿದೆ.
ಸರ್ಕಾರ ಈ ಕೂಡಲೇ ಕಾನೂನಿನ ಪ್ರಕಾರ ಅಧಿಕಾರೇತರ ಸದಸ್ಯರನ್ನು ಒಳಗಿಂದ ವನ್ಯಜೀವಿ ಮಂಡಳಿ ರಚನೆ ಮಾಡಬೇಕು. ಅಲ್ಲಿವರೆಗೂ ಸಭೆಯಲ್ಲಿ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.

Previous articleಸುನಿಲ್ ಗವಾಸ್ಕರ್ 10000 ಟೆಸ್ಟ್ ರನ್‌: 37 ನೇ ವಾರ್ಷಿಕೋತ್ಸವ
Next articleಕಾಡು ಹಂದಿ ದಾಳಿ : ಮಹಿಳೆ ಸಾವು