‘ಸಂಚಾರಿ ಕಾವೇರಿ’ ದೇಶದಲ್ಲೇ ಮೊದಲ ಯೋಜನೆ

0
33

ಬೆಂಗಳೂರಿಗೆ ಶುದ್ಧ ಕುಡಿಯುವ ನೀರು: ‘ಟ್ಯಾಂಕರ್ ಸಿಟಿ’ ಎಂದು ಕರೆದವರಿಗೆ ತಕ್ಕ ಉತ್ತರ

ಬೆಂಗಳೂರು: ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ‘ಸಂಚಾರಿ ಕಾವೇರಿ’ ಮೂಲಕ ಮನೆ ಬಾಗಿಲಿಗೆ ನೀರು ಸರಬರಾಜು ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ Kaveri on Wheels – Connecting the last mile! ಬೇಸಿಗೆ ಸಮಯದಲ್ಲಿ ಶುದ್ಧ‌ ಕುಡಿಯುವ ನೀರಿನ ಸಮಸ್ಯೆ, ಗಗನಕ್ಕೇರುವ ಟ್ಯಾಂಕರ್ ದರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ನನ್ನ ಸೂಚನೆಯ ಮೇರೆಗೆ, BWSSB ವತಿಯಿಂದ ‘ಸಂಚಾರಿ ಕಾವೇರಿ’ ಎಂಬ ವಿನೂತನವಾದ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಈ ಯೋಜನೆ ದೇಶದಲ್ಲೇ ಮೊದಲು!

ಖಾಸಗಿ ಟ್ಯಾಂಕರ್‌ಗಳ ದರ ಏರಿಕೆಯ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರಿನ ಜನತೆಗೆ ನಿಗದಿತ ದರದಲ್ಲಿ ಶುದ್ಧ ನೀರು ದೊರಕುವ ವ್ಯವಸ್ಥೆ ಇದಾಗಿದೆ. ಆನ್‌ಲೈನ್ ಬುಕ್ಕಿಂಗ್ ಮಾಡಿದರೆ, ಬಿಐಎಸ್‌ ಪ್ರಮಾಣೀಕೃತ ಶುದ್ಧ ಕುಡಿಯುವ ನೀರು ಇನ್ನು ಮುಂದೆ ಬೆಂಗಳೂರು ಜಲಮಂಡಳಿಯ ಟ್ಯಾಂಕರ್‌ಗಳ ಮೂಲಕವೇ ಮನೆ ಬಾಗಿಲಿಗೆ ಸರಬರಾಜು ಆಗಲಿದೆ. ಬೆಂಗಳೂರನ್ನು ‘ಟ್ಯಾಂಕರ್ ಸಿಟಿ’ ಎಂದು ಕರೆದವರಿಗೆ ಈ ಮೂಲಕ ತಕ್ಕ ಉತ್ತರವನ್ನು ನೀಡಲಿದ್ದೇವೆ! ಎಂದಿದ್ದಾರೆ.

Previous articleಲೋಕಾಯುಕ್ತ ಬಲೆಗೆ ಬಿದ್ದ ಬಿಇಒ
Next articleಜನಿವಾರ ತೆಗೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ