ಶೆಟ್ಟರ್, ಸವದಿ ಹೊರ ನಡೆದಿದ್ದು ಬಿಜೆಪಿಗೆ ಲಾಭ

0
21

ಬಾಗಲಕೋಟೆ: ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಂದ ಬಿಜೆಪಿಗೆ ಲಾಭವಾಗಿದೆ ಹೊರತು ಹಾನಿಯಾಗಿಲ್ಲ. ಇವರ ಆಟ ಕಾಂಗ್ರೆಸ್‌ನಲ್ಲಿಯೂ ಏನು ನಡೆಯಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟುವಾಗಿ ಟೀಕಿಸಿದರು.
ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿಯ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಶೆಟ್ಟರ ಹಾಗೂ ಸವದಿ ಹೊರ ನಡೆದಿದ್ದು ಬಿಜೆಪಿಗೆ ಲಾಭವಾಗಿದೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ರಾಮಯ್ಯ, ಡಿ.ಕೆ. ಶಿವಕುಮಾರ ಸೇರಿದಂತೆ ಸರದಿಯಂತೆ ಸಿಎಂ ಆಗಲು ನಿಂತಿದ್ದಾರೆ. ಅವರಿಗೆ ನಂಬರೇ ಇಲ್ಲ ಯಾಕೆ ಕಿತ್ತಾಡ್ತಾರೋ ತಿಳಿದಲ್ಲವೆಂದು ಶಾ ಲೇವಡಿ ಮಾಡಿದರು.

Previous articleಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ
Next articleಅಮಿತ್ ಶಾ ಹೆಲಿಕಾಪ್ಟರ್ ಪರಿಶೀಲನೆ