ಶಿವಮೊಗ್ಗ – ಚೆನ್ನೈ ರೈಲು ಆರಂಭಕ್ಕೆ ಕ್ಷಣಗಣನೆ

0
14
train

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರ ಬಾಂಧವರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಕ್ಷಣಗಣನೆಗೆ ಮುಹೂರ್ತ ನಿಗದಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಚುನಾವಣೆಗೂ ಮುನ್ನ ತಾಂತ್ರಿಕ ಕಾರಣದಿಂದ ನಿಲುಗಡೆಯಾಗಿದ್ದ “ಶಿವಮೊಗ್ಗ – ಚೆನ್ನೈ” ರೈಲು ಕ್ಷೇತ್ರದ ಜನತೆಯ ಬೇಡಿಕೆ ಮೇರೆಗೆ ಇದೇ ತಿಂಗಳ ಜುಲೈ 10 ರಂದು ಸಂಚಾರ ಆರಂಭಿಸಲು ಸಜ್ಜಾಗಿದೆ.
ನನ್ನ ಈ ಬೇಡಿಕೆಗೆ ತಕ್ಷಣವೇ ಸ್ಪಂದಿಸಿ ಅನುಮೋದನೆ ನೀಡಿದ ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಮಾನ್ಯ ರೈಲ್ವೇ ಖಾತೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಗೆ ತರಲು ಸಾಕಷ್ಟು ಬೇಡಿಕೆ ಸಚಿವದ್ವಯರಲ್ಲಿ ಮಂಡಿಸಿದ್ದು ಶೀಘ್ರವಾಗಿ ಅನುಮೋದನೆ ದೊರಕುತ್ತದೆ ಎಂಬ ಆಶಾಭಾವ ಈ ಮೂಲಕ ಮೂಡಿದೆ ಎಂದಿದ್ದಾರೆ.

Previous articleಕಿತ್ತಾಳೆ ಹಾಡಿಗೆ ಹೊಸ ರೂಪಾಂತರ…
Next articleಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್‌ ನಿಧನ