ಶಿವಮೊಗ್ಗ: ಶಿವಮೊಗ್ಗದಲ್ಲಿ ಇಡಿ ೮ ಕಡೆ ದಾಳಿ ನಡೆಸಿದೆ. ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ನಿವಾಸ, ಚಾಲಕರಾಗಿದ್ದ ಕಾಮಾಕ್ಷಿ ಬೀದಿಯ ಶಿವಕುಮಾರ್ ಮನೆ, ಭದ್ರಾವತಿ ಜೆಡಿಕಟ್ಟೆಯಲ್ಲಿರುವ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ, ಮಾಡ್ರನ್ ಚಲನಚಿತ್ರ ಮಂದಿರ ದ ಬಳಿಯಿರುವ ಡಿಸಿಸಿ ಬ್ಯಾಂಕ್ ನ ಶಾಖೆಯ ಮೇಲೆ ಸೇರಿದಂತೆ ೮ ಕಡೆ ದಾಳಿ ನಡೆದಿದೆ.
ಗೋಪಾಲ ಗೌಡ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನ ಮ್ಯಾನೇಜರ್ ಶೋಭಾ ಅವರ ಮನೆಯ ಮೇಲೆ ಬೆಂಗಳೂರಿನಿಂದ ಇಡಿ ಕಚೇರಿಯ ತಂಡದಿಂದ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ದಾಳಿ ನಡೆದಿದೆ. ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ- ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಇದು ಸೇರಿ ೮ ಕಡೆ ಪ್ರತ್ಯೇಕ ವಾಹನಗಳಲ್ಲಿ ಆಗಮಿಸಿರುವ ೯೬ ಜನಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ.
೨೦೧೪ರ ಜೂನ್ ನಲ್ಲಿ ನಡೆದಿದ್ದ ನಕಲಿ ಗೋಲ್ಡ್ ಪ್ರಕರಣ, ಸುಮಾರು ೬೮ ಕೋಟಿ ಎಷ್ಟು ಮೌಲ್ಯದ ನಕಲಿ ಗೋಲ್ಡ್ ಪ್ರಕರಣ ದಾಖಲಾಗಿತ್ತು. ಶಿವಮೊಗ್ಗದ ಗಾಂಧಿ ಬಜಾರ್ ನಗರ ಶಾಖೆಯಿದ್ದಾಗ ಹಗರಣ ನಡೆದಿದೆ. ಆ ವೇಳೆ ಶಾಖೆಯ ಮ್ಯಾನೇಜರ್ ಶೋಭಾ ಆಗಿದ್ದರು.
ಇದೇ ವೇಳೆ ಬ್ಯಾಂಕ್ ನ ವಾಹನ ಚಾಲಕನಾಗಿದ್ದ ನಿವಾಸದ ಮೇಲು ದಾಳಿ ನಡೆದಿದೆ. ಕಾಮಾಕ್ಷಿ ಬೀದಿಯ ಶಿವಕುಮಾರ್ ಎಂಬುವರ ಮನೆ ಮೇಲು ಇಡಿ ತಂಡದ ಪ್ರತ್ಯೇಕ ದಾಳಿ ನಡೆದಿದೆ. ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆದಿದ್ದು, ಭದ್ರಾವತಿಯ ಜೇಡಿಕಟ್ಟೆಯಲ್ಲಿ ಸಿಬ್ಬಂದಿಯ ಮನೆಯ ಮೇಲೂ ಮತ್ತು ಈ ಹಿಂದೆ ಬಜಾರ್ ನಲ್ಲಿದ್ದ ಶಾಖೆ ಈಗ ಮಾಡ್ರನ್ ಚಲನಚಿತ್ರ ಮಂದಿರದ ಬಳಿ ಶಿಫ್ಟ್ ಆಗಿದ್ದು, ದಾಳಿ ನಡೆದಿದೆ.