ಬೆಂಳೂರು: ಹಗರಣಗಳ ಕುರಿತ ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪಕ್ಷದ ಸಂಘಟನಾತ್ಮಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತ ಮಾಹಿತಿ ವಿವರಗಳನ್ನು ನೀಡಲಾಯಿತು. ಸಂಘಟನೆಯ ಕುರಿತು ನಿರಂತರ ಮಾರ್ಗದರ್ಶನ ನೀಡುತ್ತಾ ಬಂದಿರುವ ಅವರು ಕರ್ನಾಟಕದ ಪ್ರಸ್ತುತ ಬೆಳವಣಿಗೆಯಲ್ಲಿ ಪಕ್ಷ ನಿರ್ವಹಿಸುತ್ತಿರುವ ರೀತಿ-ನೀತಿಗಳ ಕುರಿತು ಮೆಚ್ಚುಗೆ ಸೂಚಿಸಿದರು. ಪಕ್ಷ ಬಲವೃದ್ಧಿಗೆ ಪ್ರೇರಣೆ ತುಂಬುವ ಚೈತನ್ಯಶೀಲ ವ್ಯಕ್ತಿತ್ವದ ಅಮಿತ್ ಶಾ ಅವರ ಇಂದಿನ ಭೇಟಿ ನನ್ನಲ್ಲಿ ಅದಮ್ಯ ಉತ್ಸಾಹ ತುಂಬಿದೆ ಎಂದಿದ್ದಾರೆ.