ವಿಪಕ್ಷ ಇರುವುದೇ ಸರ್ಕಾರದ ವಿರುದ್ಧ ಯುದ್ಧಕ್ಕಾಗಿ

0
9

ಬೆಂಗಳೂರು: ಸರ್ಕಾರದ ತಪ್ಪುಗಳನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಮತ್ತು ಸ್ನೇಹಕ್ಕಾಗಿ ವಿರೋಧ ಪಕ್ಷಗಳು ಇಲ್ಲ. ಜನರ ಪರವಾಗಿ ಧ್ವನಿ ಎತ್ತಿ ಹೋರಾಡುವುದಕ್ಕಾಗಿ ಇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆ.ಪಿ. ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ತಪ್ಪುಗಳ ವಿರುದ್ಧ ಯುದ್ಧ ನಡೆಸುವುದಕ್ಕಾಗಿ ಜೆಡಿಎಸ್ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಕಾಂಗ್ರೆಸ್‌ ಮೊದಲು ಕೊಟ್ಟ ಮಾತಿನಂತೆ ನಡೆಯಲಿ. ನಾವು ಎಷ್ಟು ಸ್ಥಾನ ಗಳಿಸಿದ್ದೇವೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ವಿರೋಧ ಪಕ್ಷದಲ್ಲಿ ಇದ್ದು ಪ್ರಬಲ ಹೋರಾಟ ನಡೆಸುತ್ತೇವೆ. ಅದಕ್ಕೆ ಬಿಜೆಪಿಯವರಂತೆ ಆತುರವೂ ಇಲ್ಲ. ಸರ್ಕಾರ ಕೆಲಸ ಮಾಡಲು ಒಂದಷ್ಟು ದಿನ ಕಾಲಾವಕಾಶ ನೀಡುತ್ತೇವೆ. ನಂತರ ಹೋರಾಟ ಆರಂಭಿಸಲಾಗುವುದು ಎಂದರು.

Previous articleಅಪಘಾತ: ವ್ಯಕ್ತಿ ಸಾವು
Next articleಡ್ರಗ್ಸ್ ವಿರುದ್ದ ಕಠಿಣ ಕ್ರಮ