ಮಂಗಳೂರು: ಚಿನ್ನದ ಪದಕಗಳ ವಿಜೇತ ವಿಜಯ್ ಕಾಂಚನ್ ಅವರಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆಗಳು ತಿಳಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಷ್ಯಾ, ಪೆಸಿಫಿಕ್, ಆಫ್ರಿಕಾ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕಗಳ ವಿಜೇತರಾಗಿರುವ ಸಹೋದರ ಶ್ರೀ ವಿಜಯ್ ಕಾಂಚನ್ ಅವರಿಗೆ ಅಭಿನಂದನೆಗಳು ಎಂದಿದ್ದು, ನಿಮ್ಮ ಸಾಧನೆಯ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮೇಲೆ ರಾರಾಜಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ
ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಷ್ಯಾ- ಫೆಸಿಫಿಕ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2024ನಲ್ಲಿ 105 ಕೆ.ಜಿ ವಿಭಾಗದ ಎಂ 2ನಲ್ಲಿ ವಿಜಯ ಕಾಂಚನ್ ಬೈಕಂಪಾಡಿ ಎರಡು ಚಿನ್ನದ ಪದಕ ಪಡೆದು ಬೆಸ್ಟ್ ಲಿಫ್ಟರ್ ಪ್ರಶಸ್ತಿ ಪಡೆದಿದ್ದಾರೆ. ಮಂಗಳೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐಯಾಗಿದ್ದಾರೆ.