ವಾಣಿಜ್ಯನಗರಿಯಲ್ಲಿ‌ ದರೋಡೆ: ಸೆಕ್ಯೂರಿಟಿ ಗಾರ್ಡ್ ಕಟ್ಟಿ ಹಾಕಿ ಕಳ್ಳತನ

0
16

ಹುಬ್ಬಳ್ಳಿ: ಉದ್ಯಮಿಯೊಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್’ನನ್ನು ಥಳಿಸಿ ಮನೆಯನ್ನು ದರೋಢೆ ಮಾಡಿರುವ ಘಟನೆ ಅಶೋಕನಗತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ನಡೆದಿದೆ..
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಂದ್ರ ಶೋರೂಂ ಉದ್ಯಮಿ ಸಚಿನ್ ಸೂತಾರಿಯಾ ಎಂಬಾತರ ಮನೆಯೇ ಕಳ್ಳತನ ಮಾಡಲಾಗಿದೆ.
ರಾತ್ರೋರಾತ್ರಿ ಮನೆಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್’ನನ್ನು ಥಳಿಸಿ, ಕಟ್ಟಿ ಹಾಕಿ ಕೆಳಗಿನ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಎಸ್ಕೆಪ್ ಆಗಿದ್ದಾರೆ.
ಇನ್ನೂ ಸೆಕ್ಯೂರಿಟಿಯನ್ನು ಮನೆಯ ಹಿಂದಿನ ಮೈದಾನದಲ್ಲಿ ಎಸೆದು ಹೋಗಿದ್ದಾರೆ. ಬೆಳಿಗ್ಗೆ ಘಟನೆ ಬೆಳೆಕಿಗೆ ಬಂದಿದ್ದು, ಕೂಡಲೇ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ನಂದಗಾವಿ ಹಾಗೂ ರವೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಆಶಾಭಾವನೆಗಳ ಭಾರತ
Next articleಉಕ‌ ಸಮಸ್ಯೆ ಚರ್ಚೆಗೆ ನಾವು ಸಿದ್ಧ: ಬಿಜೆಪಿಗೆ ಆಸಕ್ತಿಯಲ್ಲ