ವರದಿ ಮಾಡಿದ 24 ಗಂಟೆಯೊಳಗೆ ಸ್ವಚ್ಚತೆ ಕಂಡ ಕುಳಗೇರಿ ಕ್ರಾಸ್ ಬಸ್ ನಿಲ್ದಾಣ: ಪತ್ರಿಕೆಗೆ ದನ್ಯವಾದ ಹೇಳಿದ ಗ್ರಾಮಸ್ಥರು

0
42

ವರದಿ: ರೇವಣಸಿದ್ದಯ್ಯ ಹಿರೇಮಠ.

ಬಾಗಲಕೋಟೆ (ಕುಳಗೇರಿ ಕ್ರಾಸ್): ನಗರದ ಬಸ್ ನಿಲ್ದಾಣ ಅವ್ಯವಸ್ಥೆ ಕುರಿತಂತೆ ನಮ್ಮ ಸಂಯುಕ್ತ ಕರ್ನಾಟಕ ಡಿಜಿಟಲ್ ಸುದ್ದಿ ಮಾಡಿ ಗಮನ ಸೆಳೆದಿತ್ತು, ವರದಿ ನಂತರ ಎಚ್ಚೆತ್ತ ಕೆಎಸ್ಆರ್‌ಟಿಸಿ ಬಾಗಲಕೋಟೆ ವಿಭಾಗ ಸಂಚಾರ ಅಧಿಕಾರಿ ಕೆ ಕೆ ಲಮಾಣಿ ಹಾಗೂ ಎಇಇ ಎಚ್ ನಾಯಿಕ್ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಬಸ್ ನಿಲ್ದಾಣದಲ್ಲಿನ ಸ್ವಚ್ಚತೆ ಕಾಪಾಡುವಂತೆ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ಹೊಟೇಲ್ ವಿಕ್ಷಣೆ ಮಾಡಿದ ಅವರು ಹೊಟೇಲ್ ಸುತ್ತ ನಿತ್ಯ ಸ್ವಚ್ಚವಾಗಿಟ್ಟು ಗಲಿಜಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮತ್ತೆ ಮುಸುರೆ ನೀರು ಚೆಲ್ಲುವದಾಗಲಿ, ಗಲಿಜು ಮಾಡುವುದಾಗಲಿ ಮಾಡಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಹೊಟೇಲ್ ಮಾಲಿಕನಿಗೆ ತಾಕಿತು ಮಾಡಿದ್ದಾರೆ, ಇನ್ನು ಶೌಚಾಲಯದ ಸೇಫ್ಟಿ ಟ್ಯಾಂಕ್ ಸ್ವಚ್ಚಗೊಳಿಸುವ ಮೂಲಕ ನಿಲ್ದಾಣದಲ್ಲಿನ ಕಸ ವಿಲೇವಾರಿ ಮಾಡಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.

Previous articleಮೈಸಾ ಆದ ಮಂದಣ್ಣ
Next articleಕೆಂಪೇಗೌಡರ ಕನಸನ್ನು ನನಸು ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ