ರೈಲಿಗೆ ಸಿಲುಕಿ ವೃದ್ಧ ಸಾವು

0
16

ವಾಡಿ: ಪಟ್ಟಣದ ಶ್ರೀಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆಯ ನಿವಾಸಿ ಅಶೋಕ ಕಾನಕುರ್ತೆ (70) ಎಂಬುವರು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಮಂಗಳವಾರ ಆಂಧ್ರ ಪ್ರದೇಶದ ಕಡಪಾ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಸಹ ಪಾಠಿಗಳ ಜೊತೆ ರಾಮೇಶ್ವರ ತೀರ್ಥ ಯಾತ್ರೆಗೆ ಹೊರಟ್ಟಿದ್ದರು ಎನ್ನಲಾಗಿದ್ದು, ಕುಡಿಯುವ ನೀರು ತರಲು ಕಡಪಾ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ಈ ವೇಳೆ ಚಲಿಸುತ್ತಿದ್ದ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಈ ದುರಂತ ಘಟನೆ ಸಂಭವಿಸಿದೆ. ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ಬುಧವಾರ ಹಿಂದೂ ಧರ್ಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Previous articleಸೆ.17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಘೋಷಣೆ
Next articleಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ?