ರಾಜ್ಯದ 1,316 ಶಾಲೆಗಳು ಅನಧಿಕೃತ

0
32

ಬೆಂಗಳೂರು: ರಾಜ್ಯದಲ್ಲಿರುವ 34 ಶೈಕ್ಷಣಿಕ ಜಿಲ್ಲೆಗಳಲ್ಲಿ1,316 ಅನಧಿಕೃತ ಶಾಲೆಗಳಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. 1316 ಶಾಲೆಗಳ ಪೈಕಿ 63 ಶಾಲಾ ನೋಂದಣಿ ಅನುಮತಿ ಪಡೆಯದೇ ನಡೆಯುತ್ತಿವೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 1316 ಅನಧಿಕೃತ ಶಾಲೆಗಳು ರಾಜ್ಯದಲ್ಲಿವೆ ಎಂದು ಶಿಕ್ಷಣ ಇಲಾಖೆ ಗುರುತಿಸಿದೆ.
ಬೆಂಗಳೂರಿನಲ್ಲೇ ನೂರಾರು ಸಿಬಿಎಸ್ಇ ಹಾಗೂ ಐಸಿಎಸ್ಇ ಹೆಸರಿನಲ್ಲಿ ಹಾಗೂ ಯಾವುದೇ ಅನುಮತಿ ಇಲ್ಲದೆ ಅಂತರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಖಾಸಗಿ ಶಾಲೆಗಳು ಬಹಿರಂಗವಾಗಿ ಶಾಲೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

Previous articleಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ನನ್ನ ಸ್ಪರ್ದೆ ಖಚಿತ: ಹಿರೇಮಠ
Next articleಬಿಜೆಪಿ ಶಾಸಕನ ಹತ್ಯೆಗೆ ಸುಪಾರಿ: ಇಬ್ಬರ ಬಂಧನ