ರಾಜೀನಾಮೆ ನೀಡಿದ ಅಧ್ಯಕ್ಷ, ಉಪಾಧ್ಯಕ್ಷ

0
21
ಇಳಕಲ್

ಇಳಕಲ್: ಇಲ್ಲಿನ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮಂಜುನಾಥ ಶೆಟ್ಟರ ಮತ್ತು ಜಿ.ಎಚ್. ಗುಳೇದ ರಾಜೀನಾಮೆಯನ್ನು ಸೋಮವಾರದಂದು ಬಾಗಲಕೋಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಅರ್ಪಿಸಿದರು.
ಪಕ್ಷದ ಒಳ ಒಪ್ಪಂದದ ಪ್ರಕಾರ ತಮಗೆ ನೀಡಿದ ಅವಧಿ ಮುಗಿದ ಕಾರಣ ಇಬ್ಬರೂ ರಾಜಿನಾಮೆ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಈ ಸಮಯದಲ್ಲಿ ಸದಸ್ಯರಾದ ಸೂಗುರೇಶ ನಾಗಲೋಟಿ ವಿಜಯ ಗಿರಡ್ಡಿ, ಹುಸೇನಸಾಬ ಬಾಗವಾನ ಚಂದ್ರಶೇಖರ ಏಕಬೋಟೆ, ರಾಘವೇಂದ್ರ ಸೂರೆ, ಬಸವರಾಜ ಗೋನಾಳ, ಮಹಾಂತೇಶ ಕಂಪ್ಲಿ, ವಿಠ್ಠಲ ಜಕ್ಕಾ ಮತ್ತಿತರರಿದ್ದರು.

Previous articleನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ: ಬಯ್ಯಾಪುರ
Next articleಆತ್ಮಹತ್ಯೆಗೆ ಶರಣಾದ ದಂಪತಿ