ರಸ್ತೆ ಅಪಘಾತ, ಪಲ್ಟಿಯೊಡೆದ ಬಸ್, ಬೈಕ್ ಸವಾರರಿಬ್ಬರು ಸಾವು

0
63

ಬಾಗಲಕೋಟೆ : ಮುಧೋಳ ಬಳಿ ಬಸ್ ಹಾಗೂ ಬೈಕ್ ಮಧ್ಯದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ‌.

ಶ್ರೀಶೈಲದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಹೊರಟಿದ್ದ ಬಸ್ ಹಾಗೂ ಮುಗಳಖೋಡದಿಂದ ಮುಧೋಳ ಕ್ಕೆ ಹೊರಟಿದ್ದ ಬೈಕ್ ಮಧ್ಯೆ ಶನಿವಾರ ಮುಧೋಳದ ಬಳಿ ಅಪಘಾತ ಸಂಭವಿಸಿದೆ. ಬೈಕ್ ಗೆ ಢಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ರಸ್ತೆಗೆ ಹೊಂದಿಕೊಂಡು ಹಾಕಿದ್ದ ನಾಮಫಲಕದ ಕಂಬಕ್ಕೆ ಬಸ್ ಢಿಕ್ಕಿ ಹೊಡೆದಿದ್ದರಿಂದ ಬಸ್ ಪಲ್ಟಿ ಆಗಿದೆ. ಆ ಕಡೆ ಬೈಕ್ ಸವಾರರೂ ಸಹ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮುಗಳಖೋಡ ಮೂಲದ ಬೈಕ್ ಸವಾರರಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಬಸ್ ಮುಗುಚಿಬಿದ್ದಿದೆ. ಬಸ್ ನಲ್ಲಿದ್ದ 40 ಜನರಿಗೆ ಗಾಯಗಳಾಗಿದ್ದು, ಮುಧೋಳ ಹಾಗೂ ಬಾಗಲಕೋಟೆ ಆಸ್ಪತ್ರೆ ಗಳಿಗೆ ದಾಖಲಿಸಲಾಗಿದೆ.

Previous articleರೈತನಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಬೆಸ್ಕಾಂ ಎಇಇ
Next articleಸರಕಾರಿ ಹುದ್ದೆಗಳ ನಕಲಿ ಆದೇಶ ಪ್ರತಿ ಸೃಷ್ಟಿಸುತ್ತಿದ್ದ ಆರೋಪಿಗಳಿಬ್ಬರ ಸೆರೆ