ಬೆಂಗಳೂರು: ಸುಪ್ರೀಂ ಕೋರ್ಟ್ ಇವತ್ತು ನೀಡಿರುವ ಅತ್ಯಂತ ಮಹತ್ವದ ತೀರ್ಪು ಐತಿಹಾಸಿಕ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆವರು “ಸುಪ್ರೀಂ ಕೋರ್ಟ್ ಇವತ್ತು ನೀಡಿರುವ ಅತ್ಯಂತ ಮಹತ್ವದ ತೀರ್ಪು ಐತಿಹಾಸಿಕವಾಗಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಿದೆ. ಹಾಗೂ ಕೇಂದ್ರ ಸರ್ಕಾರ ಆರ್ಟಿಕಲ್ 370 ಯನ್ನು ರದ್ದುಪಡಿಸಿರುವುದನ್ನು ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೂರದೃಷ್ಟಿ ಇರುವ ಭಾರತದ ಏಕತೆ ಮತ್ತು ಅಖಂಡತೆ ಎತ್ತಿ ಹಿಡಿಯುವ ದಿಟ್ಟ ನಿರ್ಧಾರ ಮಾಡಿ ಜಮ್ಮು ಕಾರ್ಶಿರದಲ್ಲಿ ಶಾಂತಿ, ನೆಮ್ಮದಿ ಸ್ಥಾಪನೆಗೆ ನಾಂದಿ ಹಾಡಿರುವ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಸಹಮತ ಮುದ್ರೆ ಒತ್ತಿದ್ದು ಮೋದಿ ಸರ್ಕಾರದ ಸಾಧನೆಗೆ ಮತ್ತೊಂದು ಗರಿ ಇಟ್ಟಂತಾಗಿದೆ ಎಂದು ಬರೆದುಕೊಂಡಿದ್ದಾರೆ.