ಮೂವರು ಮಂಗಳಮುಖಿಯರ ಬಂಧನ

0
24

ಕಲಬುರಗಿ: ನಗರದಲ್ಲಿ ಸಹಚರ ಮಂಗಳಮುಖಿಯನ್ನು ಬೆತ್ತಲೆಗೊಳಿಸಿ ಕೇಶ ಮುಂಡನ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಂಗಳಮುಖಿಯರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಶೀಲಾ ಅಲಿಯಾಸ್ ವಿಜಯಕುಮಾರ್(೩೮), ಭವಾನಿ ಅಲಿಯಾಸ್ ಬಸವರಾಜ್(೨೪) ಮತ್ತು ಅಂಕಿತಾ ಅಲಿಯಾಸ್ ಅಂಕುಶ್ ಬಂಧಿತರು. ಈ ಮೂವರೂ ಒಂದಾಗಿ ಅಂಕಿತಾ ಎಂಬ ಮಂಗಳಮುಖಿಯನ್ನು ಬೆತ್ತಲೆಗೊಳಿಸಿ ಕೇಶ ಮುಂಡನ ಮಾಡಿ ಹಲ್ಲೆ ನಡೆಸಿದ್ದರು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಈ ಘಟನೆಯಿಂದ ಘಾಸಿಗೊಂಡಿದ್ದ ಅಂಕಿತಾ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ, ತಮ್ಮದೇ ಸಮುದಾಯದ ಮಂಗಳಮುಖಿ ವಿರುದ್ಧ ಈ ಮೂವರೂ ನಡೆಸಿದ್ದ ವಿಕೃತ ವರ್ತನೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದಲ್ಲದೆ, ವ್ಯಾಪಕ ಟೀಕೆಗೂ ಒಳಗಾಗಿತ್ತು. ಇದರಿಂದ ತಕ್ಷಣ ಜಾಗೃತಗೊಂಡ ಅಶೋಕ ನಗರ ಠಾಣೆ ಪೊಲೀಸರು ಕಾರ್ಯೋನ್ಮುಖರಾಗಿ ಘಟನೆಗೆ ಸಂಬಂಧಿಸಿದಂತೆ ಮೂವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ.

Previous articleಪೊಲೀಸ್ ಠಾಣೆಯಲ್ಲೇ ಜೂಜಾಟ ಪ್ರಕರಣ: ಐವರು ಅಧಿಕಾರಿಗಳ ಅಮಾನತು
Next articleಸಾಲ ಬಾಧೆ: ರೈತ ಆತ್ಮಹತ್ಯೆ