Home Advertisement
Home ತಾಜಾ ಸುದ್ದಿ ಮುಡಾ ಅಕ್ರಮ:  ನಿವೃತ್ತ ನ್ಯಾಯಾಧೀಶರ ಏಕ ಸದಸ್ಯ ಆಯೋಗ ರಚನೆ

ಮುಡಾ ಅಕ್ರಮ:  ನಿವೃತ್ತ ನ್ಯಾಯಾಧೀಶರ ಏಕ ಸದಸ್ಯ ಆಯೋಗ ರಚನೆ

0
104

ಬೆಂಗಳೂರು:  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯ ಅಕ್ರಮ ಆರೋಪ ಕುರಿತು ತನಿಖೆ ಸಲುವಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಆಯೋಗದ ನೇತೃತ್ವ ವಹಿಸಲಿದ್ದಾರೆ.
ಮುಡಾ’ ನಿವೇಶನ ಅಕ್ರಮ ಆರೋಪ ಕುರಿತು ದೇಸಾಯಿ ನೇತೃತ್ವದ ವಿಚಾರಣಾ ಆಯೋಗವು ಸಮಗ್ರ ತನಿಖೆ ನಡೆಸಬೇಕು. ಮುಂದಿನ ಆರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.

Previous articleಹಲೋ.. ನಾನ್ ಎಸಿಪಿ ಎಂದವನಿಗೆ ಬಿತ್ತು ಕೇಸ್
Next articleಮನೆಯಲ್ಲಿ ಅಗ್ನಿ ಅವಘಡ: ಬಾರ್ ಮಾಲಕ ಸಾವು, ಪತ್ನಿ ಗಂಭೀರ