ಮಾರ್ಚ್ ಎರಡನೇ ವಾರ ಮಳೆ ಸಾಧ್ಯತೆ

0
10

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿರು ಬಿಸಿಲಿನ ವಾತಾವರಣ ಮುಂದುವರಿಯುತ್ತಿದೆ. ಈಗಲೇ ತಾಪಮಾನದ ಪ್ರಮಾಣ ಹೀಗೆ ಏರಿಕೆಯಾದರೆ ಬೇಸಿಗೆಯಲ್ಲಿ ಇನ್ನೆಷ್ಟು ಏರಿಕೆಯಾಗಲಿದೆ ಎಂದು ಜನರನ್ನು ಚಿಂತಗೀಡು ಮಾಡಿದೆ.
ಆದರೆ ಮಾರ್ಚ್ ಎರಡನೇ ವಾರದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ಬೆಂಗಳೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾರ್ಚ್ ಆರಂಭದಲ್ಲಿ ಮಳೆ ಆರಂಭವಾಗಿ, ತಾಪಮಾನ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ಕೊಡಗು ಸೇರಿದಂತೆ ಇನ್ನೆರಡು ದಿನದೊಳಗೆ ಹಲವೆಡೆ ಅಕಾಲಿಕ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ರೀತಿ ಬಿಸಿಲಿನ ವಾತಾವರಣ ಮುಂದುವರಿದರೆ ಇನ್ನು ೧೫ ದಿನದೊಳಗೆ ಈ ಜಿಲ್ಲೆಗಳಲ್ಲಿ ಆಲಿಕಲ್ಲಿನಿಂದ ಕೂಡಿದ ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Previous article೬ನೇ ಶತಮಾನದ ರಾಮನ ವಿಗ್ರಹ ಪತ್ತೆ
Next articleದ್ವಾರಕೆಯಲ್ಲಿ ಸ್ಕೂಬಾ ಡೈವಿಂಗ್