ಮಸೀದಿಗೆ ಮಂಗಳಾರತಿ: ಪ್ರಕರಣ ದಾಖಲು

0
20

ಕೊಪ್ಪಳ: ಗಣೇಶ ಮೂರ್ತಿ ವಿಸರ್ಜನೆ ವೇಳೆಯಲ್ಲಿ ಮಸೀದಿಗೆ ಮಂಗಳಾರತಿ ಮಾಡಿದ್ದಾರೆ ಎಂದು ಆರೋಪಿಸಿ ಐವರು ಹಿಂದೂ ಯುವಕರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸೆ. ೨೮ರಂದು ಗಂಗಾವತಿಯಲ್ಲಿ ಗಲಭೆ ಮಾಡುವ ಉದ್ಧೇಶದಿಂದ ಮಸೀದಿ ಬಾಗಿಲಿಗೆ ಮಂಗಳಾರತಿ ಮಾಡಿದ್ದು, ಜೈ ಶ್ರೀರಾಮ, ಭಾರತ್ ಮಾತಾ ಕೀ ಜೈ, ಗವಿ ಗಂಗಾಧರೇಶ್ವರ ಮಹಾರಾಜ ಕೀ ಜೈ ಎನ್ನುವ ಘೋಷಣೆಗಳನ್ನು ಯುವಕರು ಕೂಗಿದ್ದಾರೆ. ಮಂಗಳಾರತಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಾಸಿಕೊಂಡಿದ್ದಾರೆ. ಕುಮಾರ ಹೂಗಾರ, ಶ್ರೀಕಾಂತ ಹೊಸಕೇರಿ, ಚನ್ನಬಸವ, ಸಂಗಮೇಶ ಅಯೋಧ್ಯಾ ಹಾಗೂ ಯಮನೂರಪ್ಪ ರಾಠೋಡ ವಿರುದ್ಧ ಪ್ರಕರಣ ದಾಖಲಾಗಿದೆ.

Previous articleತಾಯಿಗೆ ನಾಯಿಮರಿ ಉಡುಗೊರೆ ನೀಡಿದ ರಾಹುಲ್
Next articleಮತ್ತೊಂದು ವಂಚನೆ ಪ್ರಕರಣ: ಹಿರೇಹಡಗಲಿ ಮಠದಲ್ಲಿ ಹಾಲಶ್ರೀ ಮಹಜರು