SK Home Ad
Home ತಾಜಾ ಸುದ್ದಿ ಭಾರತ-ಪಾಕ್‌ ಜಲಮಾರ್ಗ ಬಂದ್‌

ಭಾರತ-ಪಾಕ್‌ ಜಲಮಾರ್ಗ ಬಂದ್‌

0
134

ನವದೆಹಲಿ: ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದಕ್ಕೆ ಹಾಗೂ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವಂತಿಲ್ಲ ಎಂದು ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಆದೇಶ ಹೊರಡಿಸಿದೆ.
ಭದ್ರತೆಯನ್ನು ಬಲಪಡಿಸುವ ಮತ್ತು ಭಾರತದ ಕಡಲ ಹಿತಾಸಕ್ತಿಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ಮುಂದಿನ ಸೂಚನೆ ಬರುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.