ಬೆಂಗಳೂರಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಡ

0
13

ಹುಬ್ಬಳ್ಳಿ: ರಾಜ್ಯ ಸರಕಾರ ಬೆಂಗಳೂರು ಭಾಗದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಮಾಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂದರೆ ಈ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಮಧ್ಯಭಾಗದಲ್ಲಿ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಮಾಡುವ ವಿಚಾರ ಒಳಿತಾಗಿರಬಹುದು. ಆದರೆ ಐಟಿ ನಿರ್ಮಾಣ ತಮಿಳುನಾಡು ಬಾರ್ಡರ್, ಐಟಿಪಿಎಲ್ ದೊಡ್ಡ ಬಿಲ್ಡಿಂಗ್ ನಿರ್ಮಾಣ, ಸರ್ಜಾಪುರ ಐಟಿ ಫೀಲ್ಡ್ ಅಭಿವೃದ್ಧಿ, ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ಇವೆಲ್ಲ ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಬಾರ್ಡರ್‌ಗೆ ಹತ್ತಿರವಾಗಿದ್ದು, ಹೆಚ್ಚು ಆ ರಾಜ್ಯಗಳಿಗೆ ಅನುಕೂಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ತಮಿಳುನಾಡು ಹತ್ತಿರದ ಹೊಸೂರು ಎಂಬಲ್ಲಿ ವಿಮಾನ ನಿಲ್ದಾಣ ಮಾಡಲು ನಿರ್ಧಾರ ಮಾಡಿದೆ. ಮೊದಲು ಬಿಡದಿ, ತುಮಕೂರು ಹತ್ತಿರ ಮಾಡಬೇಕು ಎಂಬ ವಿಚಾರವಿತ್ತು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಲೋಡ್ ಎಲ್ಲಿದೆ ಎಂಬ ವರದಿ ನೋಡಿ ಮಾಡುತ್ತೇವೆ ಎಂದಿದ್ದರು. ಇದ್ಯಾವುದು ಈಡೇರಿಲ್ಲ. ಇದರ ಬದಲು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬೆಂಗಳೂರನ್ನು ಸರಿಯಾಗಿ ಅಭಿವೃದ್ಧಿ ಮಾಡಬೇಕು. ತುಮಕೂರು ಶಿರಾ ಮದ್ಯ ಭಾಗದಲ್ಲಿ ವಿಮಾನ ನಿಲ್ದಾಣ ಮಾಡಬೇಕು ಎಂದು ಆಗ್ರಹಿಸಿದರು.

Previous articleಡೋಲಾಯಮಾನ ಸ್ಥಿತಿಗೆ ಕಾಂಗ್ರೆಸ್‌
Next articleಚನ್ನಪಟ್ಟಣದಲ್ಲಿ ಯೋಗೇಶ್ವರ ಗೆಲ್ಲುವ ಅಭ್ಯರ್ಥಿ