ಬೀರದೇವರ ಜಾತ್ರೆಯಲ್ಲಿ: ಭಂಡಾರದ ಚಿತ್ತಾರ

0
10
BANDAR

ಬಾಗಲಕೋಟೆ: ಎಲ್ಲಿ ನೋಡಿದರಲ್ಲಿ ಭಂಡಾರ… ಹಳದಿ ಬಣ್ಣದ ಚಿತ್ತಾರ… ಚಾಂಗಭಲ… ಚಾಂಗಭಲ… ಚಾಂಗಭಲ… ಎಂಬ ಘೋಷಣೆಯ ಹರ್ಷೋಧ್ಘಾರ. ಡೊಳ್ಳಿನ ಕೈಪೆಟ್ಟು… ಆರತಿ ಹಿಡಿದು ಹಾಡು ಹಾಡುತ್ತ ಸಾಗಿದ ಮಹಿಳೆಯರು… ತಾಳ ಮದ್ದಳೆಗಳ ವಾದ್ಯದೊಂದಿಗೆ ಕುಳಗೇರಿ ಗ್ರಾಮ ಭಕ್ತರಿಂದ ತುಂಬಿ ತುಳಕಿತ್ತು.
ಹೌದು ಇದೆಲ್ಲ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಭಂಡಾರಮಯ ಬೀರದೇವರ ಜಾತ್ರೆಯಲ್ಲಿ ಕಂಡುಬಂದ ದೃಷ್ಯ. ಈ ಬೀರೇಶನ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಪ್ರತಿ ವರ್ಷವೂ ಬೇಡಿಕೊಂಡಷ್ಟು ಚೀಲಗಟ್ಟಲೇ ಭಂಡಾರ ತೂರಿ ದೇವರಿಗೆ ನಮಿಸುತ್ತಾರೆ. ಬೇಡಿಕೆ ಇಡೇರಯತ್ತೆ ಎಂಬ ನಂಬಿಕೆ ಇಟ್ಟ ಭಕ್ತರು ನೂರಾರು ಚೀಲ ಭಂಡಾರ ಎರಚುತ್ತಾರೆ. ಹಿಗೆ ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಉತ್ತತ್ತಿ, ಬಾಳೆ, ಭಂಡಾರ ಎರಚಿ ಭಕ್ತಿ ಭಾವ ಸಮಿರ್ಪಿಸಿದರು.
ಜಾತ್ರೆಯ ಅಂಗವಾಗಿ ಬರಮದೇವರ ಹಬ್ಬ. ಪಲ್ಲಕ್ಕಿ ಉತ್ಸವ, ವಾಹನೋತ್ಸವ ಹಾಗೂ ದೀಪೋತ್ಸವ, ರಾತ್ರಿ ಡೊಳ್ಳಿನ ಪದಗಳು, ಪುಷ್ಪಪೂಜಾ ಕಾರ್ಯಕ್ರಮ ನಡೆದವು. ಜಾತ್ರೆಗೆ ಬಂದ ಭಕ್ತರಿಗೆ ನೀರಂತರ ಅನ್ನ ಸಂತರ್ಪಣೆ ಸೇರಿ ಮನೋರಂಜನೆ ಕಾರ್ಯಕ್ರಮಗಳು ನಡೆದವು.

Previous article50 ಬೋಟ್‌ಗಳ ಕಡಲಯಾನದಲ್ಲಿ ಮೊಳಗಿತು ಕೋಟಿ ಕಂಠ ಗಾಯನ
Next articleಮಹಿಳೆಯರ ಸಬಲೀಕರಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಕ್ರಿಶನ್ ಪಾಲ್ ಗುರ್ಜರ್