ಬಿಜೆಪಿಗೆ ಬಿಗ್‌ ಶಾಕ್: ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ಅಶೋಕ್ ತನ್ವಾರ್

0
21

ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಸೇರಿದರು.

ನವದೆಹಲಿ: ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಬರದ ಸಿದ್ದತೆಯಲ್ಲಿ ಇರುವಾಗಲೇ ಹರಿಯಾಣ ಬಿಜೆಪಿಯ ದಲಿತ ನಾಯಕ ಮತ್ತು ಬಿಜೆಪಿಯ ಸ್ಟಾರ್ ಪ್ರಚಾರಕ ಅಶೋಕ್ ತನ್ವಾರ್ ತಮ್ಮ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮರಳಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಕೆಲವೇ ಗಂಟೆಗಳಲ್ಲಿ ತನ್ವರ್ ಕಾಂಗ್ರೆಸ್ ಸೇರಿದರು. ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಸಭಿಕರನ್ನು ಕೆಲವು ನಿಮಿಷಗಳ ಕಾಲ ಕಾಯುವಂತೆ ವೇದಿಕೆಯಿಂದ ಘೋಷಣೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ, ಅಶೋಕ್ ತನ್ವಾರ್ ವೇದಿಕೆಯ ಮೇಲೆ ನಡೆದರು ಮತ್ತು “ಆಜ್ ಘರ್ ವಾಪ್ಸಿ ಹೋ ಗಯಿ ಹೈ ಎಂದು ಘೋಷಿಸಲಾಯಿತು, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಪಕ್ಷದ ಶಾಲು ನೀಡುವ ಮೂಲಕ ಅಶೋಕ್ ತನ್ವಾರ್ ಅವರನ್ನು ಪಕ್ಷಕ್ಕೆ ಮರಳಿ ಬರಮಾಡಿಕೊಂಡರು.
ಹರಿಯಾಣದಲ್ಲಿ ಅಕ್ಟೋಬರ್ 5 ರಂದು (ಶನಿವಾರ) ಮತದಾನ ನಿಗದಿಯಾಗಿದೆ.

Previous articleಬ್ರಿಟಿಷ್ ಜನತಾ ಪಕ್ಷವಾದ ಬಿಜೆಪಿ
Next articleಶಿರೂರು ಭೂ ಕುಸಿತ ದುರಂತ: ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ