SK Home Ad
Home ತಾಜಾ ಸುದ್ದಿ ಬಿಜೆಪಿ ಸ್ಥಾನ ಕಸಿದುಕೊಂಡ ಕಾಂಗ್ರೆಸ್

ಬಿಜೆಪಿ ಸ್ಥಾನ ಕಸಿದುಕೊಂಡ ಕಾಂಗ್ರೆಸ್

0
196

ಇಳಕಲ್: ಇಲ್ಲಿನ ನಗರಸಭೆಯ ೧೯ ನೇ ವಾರ್ಡಿನ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿದ್ದು ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರ ಛಿದ್ರ ಮಾಡಿದೆ.
ಕಾಂಗ್ರೆಸ್ ಪಕ್ಷದ ರತ್ನಾ ಅಮರೇಶ ತಳವಾರ ೫೨೦ ಮತಗಳನ್ನು ಪಡೆದು ೧೬೭ ಮತಗಳ ಅಂತರದಿಂದ ಗೆದ್ದಿದ್ದಾರೆ.ಬಿಜೆಪಿಯ ನಾಗೇಶ ಮೇದಾರ ೩೬೭ ಮತಗಳನ್ನು ಪಡೆದಿದ್ದಾರೆ ಹತ್ತು ಮತಗಳು ನೋಟಾ ಪರವಾಗಿ ಬಂದಿವೆ
ಈ ಹಿಂದೆ ದೇವಾನಂದ ಕಾಶಪ್ಪನವರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರತ್ನಾ ತಳವಾರ ನಗರಸಭೆಯ ಸದಸ್ಯೆಯಾಗಿ ಆಯ್ಕೆಯಾಗಿದ್ದರು ನಂತರ ನಡೆದ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿರಲಿಲ್ಲ ಆದರೆ ಉಪಚುನಾವಣೆ ಅವರಿಗೆ ಮತ್ತೊಮ್ಮೆ ನಗರಸಭೆಯ ಬಾಗಿಲನ್ನು ತೆರೆದಿದೆ.