ಬಿ.ಸಿ ರೋಡ್‌ ಮತ್ತೆ ಆತಂಕದ ಸ್ಥಿತಿ

0
20


ಮಂಗಳೂರು: ಈದ್ ಮಿಲಾದ್ ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿದ ಬಳಿಕ ಬಂಟ್ವಾಳದ ಬಿ.ಸಿ ರೋಡ್‌ನಲ್ಲಿ ಮತ್ತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿತ್ತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪೊಲೀಸರು ಈದ್ ಮಿಲಾದ್ ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿಗೆ ಅನುಮತಿ ನೀಡಿದ್ದರು. ಬೈಕ್ ರ‍್ಯಾಲಿಯಲ್ಲಿ ಹಸಿರು ಬಾವುಟ ರಾರಾಜಿಸಿತ್ತು. ಇದಕ್ಕೆ ಹಿಂದೂ ಸಂಘಟನೆಗಳ ನಾಯಕರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದಲ್ಲದೆ ರ‍್ಯಾಲಿಗೆ ಅನಮತಿ ನೀಡಿದ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಈ ಸಂದರ್ಭ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಬಳಿಕ ಎಚ್ಚೆತ್ತ ಪೊಲೀಸರು ಮುಸ್ಲಿಂ ಯುವಕರಿಂದ ಹಸಿರು ಧ್ವಜ ಹಾಗೂ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

Previous articleಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
Next articleಪ್ಯಾಲೆಸ್ತೈನ್‌ಗೆ ಜಿಂದಾಬಾದ್ ಕೂಗಿದ ಮುಸ್ಲಿಮರು