ಬಸ್ಸಿನಲ್ಲಿಯೇ ಹೃದಯಾಘಾತ: ಪ್ರಯಾಣಿಕ ಸಾವು

0
14

ಬಾಗಲಕೋಟೆ(ಇಳಕಲ್): ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ನಡೆದಿದೆ.
ಬೆಂಗಳೂರಿನಿಂದ ಸಿಂದಗಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಆಲಮೇಲ್‌ ಊರಿನ ಸಿದ್ದಪ್ಪ ಶಂಕ್ರಪ್ಪ ಬಡಿಗೇರ(೫೮) ಮೃತನಾದ ವ್ಯಕ್ತಿ. ಬೆಳಿಗ್ಗೆ ಇಳಕಲ್ ಬಸ್ ನಿಲ್ದಾಣ ಬಂದಾಗ ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಮೃತಪಟ್ಟ ವಿಷಯ ಬೆಳಕಿಗೆ ಬಂದಿದೆ. ಶವವನ್ನು ಇಳಕಲ್ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ಒಯ್ಯಲಾಯಿತು ಇಳಕಲ್ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್‌ಐ ಸೋಮೇಶ ಗೆಜ್ಜಿ ತನಿಖೆ ನಡೆಸಿದ್ದಾರೆ.

Previous articleಜೈ ಮಹಾರಾಷ್ಟ್ರ ಫಲಕ ತೆರವು
Next articleಇಸ್ಲಾಂ ಧರ್ಮದ ಶರಣರಿಂದ ಹಿರೇಮಠಕ್ಕೆ ೨೫ ಲಕ್ಷ ವೆಚ್ಚದ ರಥ