ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರುಪಾಲು

0
13

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಇಬ್ಬರು ಸೇರಿದಂತೆ ನಾಲ್ಕು ಜನ ಮಹಾರಾಷ್ಟ್ರದ ಕಾಗಲ್ ಬಳಿ ವೇದಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಬಸ್ತವಾಡೆ ಗ್ರಾಮದ ಬಳಿ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮುಳುಗಿ ಸಾವಿಗೀಡಾಗಿದ್ದಾರೆ. ಜಿತೇಂದ್ರ ವಿಲಾಸ ಲೋಕ್ರೆ (36), ರೇಷ್ಮ ದೀಪಕ ಏಳಮಲೆ (34), ಸವಿತಾ ಅಮರ ಕಾಂಬಳೆ (27) ಹಾಗೂ ಯಶ್ ದಿಲೀಪ ಕಾಂಬಳೆ (17) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಅನೂರು ಗ್ರಾಮದಲ್ಲಿ ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾಗಲ್ ಪುರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous article10 ವರ್ಷಗಳ ಕಾಲ ಜನರಿಗೆ ಉಚಿತ ಧಾನ್ಯಗಳನ್ನು ಏಕೆ ನೀಡಲಿಲ್ಲ?
Next articleನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ….