ಫ್ರೀ ಕೊಡ್ತಾರೆ ಅಂತ ಮೋದಿ ಕೈ ಬಿಟ್ರೆ ದೇಶದ ಕಥೆ ಮುಗಿತು

0
14

ಬಾಗಲಕೋಟೆ(ಕುಳಗೇರಿ ಕ್ರಾಸ್): ಇಂದು ಈಡಿ ಜಗತ್ತೇ ಭಾರತಕ್ಕೆ ಗೌರವ ಕೊಡುತ್ತಿದೆ ಎಂದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸಾಧನೆ. ಮತ್ತೆ ಮೂರನೇ ಬಾರಿಗೆ ಮೋದಿಯವರನ್ನ ಪ್ರಧಾನಿಯನ್ನಾಗಿ ಮಾಡಿದರೇ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್೨.೦ ಜನ… ಗಣ… ಮನ ಬೆಸೆಯೋಣ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಬೈಕ್ ರ‍್ಯಾಲಿ ಮೂಲಕ ಗ್ರಾಮಕ್ಕೆ ಆಗಮಿಸಿದ ಅವರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ದೇಶ ಅಭಿವೃದ್ಧಿ ಮಾಡುತ್ತಿರುವ ನಮ್ಮ ಪ್ರಧಾನಿ ಮೋದಿಯವರನ್ನ ನಾವು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಯಾತ್ರೆಯೂದ್ದಕ್ಕೂ ಜನರನ್ನ ಜಾಗೃತಿಗೊಳಿಸುವ ಮೂಲಕ ರಾಜ್ಯಾದ್ಯಂತ ಮೂರೂವರೆ ಸಾವಿರ ಕೀಮೀ ಬೈಕ್ ರ‍್ಯಾಲಿ ಮಾಡುವ ಉದ್ಧೇಶ ಹೊಂದಿದ್ದೇವೆ ಎಂದರು.
ಈ ಬಾರಿ ಟ್ರೇನ್ ಫ್ರೀ ಕೊಡ್ತೇವಿ… ಟಿಕೆಟ್ ಫ್ರೀ ಮಾಡ್ತೇವಿ ಅಂತ ಮತ್ತೆ ಮತದಾರರನ್ನ ಓಲೈಸಿ ಅಪ್ಪಿ-ತಪ್ಪಿ ರಾಹುಲ್‌ ಗಾಂಧಿಯನ್ನ ಪ್ರಧಾನಿ ಮಾಡ್ಬಿಟ್ರೇ ದೇಶದ ಕಥೆ ಮುಗಿತು ಅಂತ ತಿಳಿದುಕೊಳ್ಳಿ ಎಂದು ಆತಂಕ ವ್ಯಕ್ತಪಡಿಸಿದರು.

Previous articleಲಿಂಗಾಯತರ ವಿರುದ್ಧ ಸೇಡಿನ ಮನೋಭಾವ ಸರಿಯಲ್ಲ
Next articleಕನ್ನಂಬಾಡಿ ಅಣೆಕಟ್ಟೆಗೆ ಮುತ್ತಿಗೆ ಯತ್ನ: ವಾಟಾಳ್ ನಾಗರಾಜ್ ಬಂಧನ