ಫೇಲಾಗುವ ಭೀತಿ: ಎಸ್ಎಸ್ ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ

0
64


ಬೆಳಗಾವಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಮಂಗಳವಾರ ಘಟನೆ ನಡೆದಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ನಿವಾಸಿ ದೀಪಿಕಾ ರಾಜೇಂದ್ರ ಬಡಿಗೇರ(16) ಎಂಬುವಳೇ ಮೃತ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ದೀಪಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದು ಎರಡನೇ ವಿಷಯದ ಪರೀಕ್ಷೆಯನ್ನು ವಿದ್ಯಾರ್ಥಿನಿ ಬರೆದು ಬಂದಿದ್ದಳು ಎನ್ನಲಾಗಿದೆ.‌ಸಂಜೆ ಮನೆಗೆ ವಾಪಸ್ ಕುಟುಂಬಸ್ಥರು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Previous articleಪ್ರಶ್ನೆಪತ್ರಿಕೆ ಆಮಿಷ: 5 ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಪ್ರಕರಣ
Next articleಮತ್ತೆ ಸದ್ದು ಮಾಡುತ್ತಿದೆ ದೂರವಾಣಿ ಕದ್ದಾಲಿಕೆ