ಪ್ರತೀಕಾರ ಕೊಲೆಗೆ ಆಡಿಯೋ ವೈರಲ್‌

0
36

ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆ ಘಟನೆ ಬೆನ್ನಿಗೆ ಕಾಂಗ್ರೆಸ್‌ ಕಾರ್ಯಕರ್ತ
ಲತೀಫ್ ಉಳ್ಳಾಲ ಹೆಸರಿನಲ್ಲಿ ಪ್ರತೀಕಾರ ತೀರಿಸುವಂತೆ ಮಾತನಾಡಿರುವ ಆಡಿಯೋವೊಂದು
ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಮತ್ತೊಂದು ಹತ್ಯೆಗೆ ಬಹಿರಂಗವಾಗಿ ಕರೆ
ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಪೊಲೀಸರು ಕ್ರಮ
ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

ಈ ಕೊಲೆಗೆ ಪ್ರತೀಕಾರ ಆಗಲೇ ಬೇಕು, ಅಮಾಯಕರ ಕೊಲೆಯಾಗಿದೆ. ಸುಹಾಸ್‌ ಹತ್ಯೆಗೆ
ಪ್ರತೀಕಾರವಾಗಿ ಈ ಕೊಲೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಖಂಡನೆ, ಕ್ರಮ
ಕೈಗೊಳ್ಳಿ ಎಂದು ಆದೇಶಿಸುವಲ್ಲಿ ಯಾವುದೇ ಅರ್ಥ ಇಲ್ಲ ಎಂದು ಆಕ್ರೋಶಭರಿತವಾಗಿ
ಹೇಳಿರುವುದು ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Previous articleಶರಣ್ ಪಂಪ್ ವೆಲ್ ಪೊಲೀಸ್ ವಶಕ್ಕೆ
Next articleರೈಲ್ವೆ ಸುರಕ್ಷತೆ ಸುಧಾರಣಾ ಕ್ರಮ: ನೈಋತ್ಯ ರೈಲ್ವೆ ಜಿಎಂ ರಿಂದ ಪ್ರಗತಿ ಪರಿಶೀಲನಾ ಸಭೆ