ಪ್ರಚಾರ ಜಾಸ್ತಿ, ಕೆಲಸ ಕಮ್ಮಿ, ಇದು ಸರ್ಕಾರದ ನೀತಿ!

0
46

ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ಇನ್ನು ನೀಡಿಲ್ಲ

ಬೆಂಗಳೂರು: ನಾವು ಕೃಷಿಕರ ಪರ, ರೈತಪರ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಆಗಿದೆ. ಇನ್ನು ಪ್ರಚಾರ ಜಾಸ್ತಿ, ಕೆಲಸ ಕಮ್ಮಿ. ಇದು ಸರ್ಕಾರದ ನೀತಿ! ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಳೆದ ಆರು ತಿಂಗಳಿಂದ ರಾಜ್ಯದ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ₹656 ಕೋಟಿ ರೂ ಹಣವನ್ನು ಬಾಕಿ ಉಳಿಸಿಕೊಂಡಿರುವುದು ರೈತರ ಬಗೆಗೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತಿದೆ.

ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ಇನ್ನು ನೀಡಿಲ್ಲ.

ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ ಅನ್ನದಾತರಿಗೆ ಯಾವುದೇ ಉಪಯೋಗವಿಲ್ಲ. ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ್ನು ಬಿಡುಗಡೆ ಮಾಡಿ. ಬೆಲೆ ಏರಿಕೆಯ ಬಾಣವನ್ನು ಬಿಟ್ಟು ರೈತರ ಬದುಕನ್ನ ಕಸಿಯಬೇಡಿ ಎಂದಿದ್ದಾರೆ.

Previous articleಕಲಬುರಗಿ ಬಳಿ ಭೀಕರ ಅಪಘಾತ: ಮೃತರಿಗೆ ತಲಾ 2 ಲಕ್ಷ ಪರಿಹಾರ ಸಿಎಂ ಸಿದ್ದರಾಮಯ್ಯ ಘೋಷಣೆ
Next articleಪ್ರಧಾನಿ ಮೋದಿಗೆ ‘ಶ್ರೀಲಂಕಾ ಮಿತ್ರ ವಿಭೂಷಣ’ ಪ್ರಶಸ್ತಿ ಪ್ರದಾನ