ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ಯೋಗಾಸನದ ಕಠಿಣ ಭಂಗಿಗಳನ್ನು ಪ್ರದರ್ಶಿಸಿದರು. ಚೆನ್ನೈ ಪ್ರವಾಸದಲ್ಲಿರುವ ಅವರು ತಮ್ಮ ಶಿಷ್ಯ ವರ್ಗದ ಜೊತೆ ದೇವರ ಗರ್ಭಗುಡಿಯ ಮುಂಭಾಗದಲ್ಲಿ ಯೋಗಾಸನ ಮಾಡಿದರು. ಪ್ರತಿಯೊಬ್ಬರೂ ಯೋಗಾಭ್ಯಾಸ ರೂಢಿಸಿಕೊಳ್ಳಿ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗಾಸನ ಬಹಳ ಉತ್ತಮ ಎಂದು ಸಂದೇಶ ನೀಡಿದರು.



























