ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿನ ಹಗರಣಗಳ ಕುರಿತು ಪಾದಯಾತ್ರೆ ಮಾಡಲಿ!
ಬೆಂಗಳೂರು: ಬಿಜೆಪಿಯವರು ಪಾದಯಾತ್ರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು! ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ಬಿಜೆಪಿಯವರು ಪಾದಯಾತ್ರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು! ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿನ 40 ಕಮಿಷನ್, ಕೋವಿಡ್ ಹಗರಣ, ಭೋವಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಲ್ಲಿ ನಡೆದ ಹಗರಣಗಳು, ಹಾಗೂ ಅವರದ್ದೇ ಪಕ್ಷದ ಶ್ರೀ ಯತ್ನಾಳ್ ಅವರು ಮಾಡಿರುವ ಆರೋಪಗಳ ಕುರಿತು ಪಾದಯಾತ್ರೆ ಮಾಡಲಿ! ಮೂಡಾದಲ್ಲಿ ಯಾವುದೇ ಹಗರಣವಾಗಿಲ್ಲ. ಈ ಕುರಿತು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಿದ್ದಾರೆ ಎಂದರು