ಪರಿಚಾರಕನ ಭಕ್ತಿ: ಸಂತನ ನೆನಪಲ್ಲಿ ಅನ್ನ ಸಂತರ್ಪಣೆ

0
25

ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ಕರ್ಣಾಟಕ ಬ್ಯಾಂಕ್‌ನ ಪರಿಚಾರಕ(ಅಟೆಂಡರ್)ನೋರ್ವ ನಡೆದಾಡುವ ದೇವರು ಸಿದ್ಧೇಶ್ವರ ಅಭಿಮಾನಿಯಾಗಿ 2ನೇ ಪುಣ್ಯಸ್ಮರಣೆ ಅಂಗವಾಗಿ ಭಕ್ತಿಪೂರ್ವಕ ಕಾರ್ಯಕ್ರಮದೊಂದಿಗೆ ಸಾವಿರಾರು ಜನರಿಗೆ ಹಾಲುಗ್ಗಿ, ಕಿಚಡಿ ಸಾಂಬಾರು ಏರ್ಪಡಿಸಿದ್ದು ವಿಶೇಷವಾಗಿತ್ತು.
ಬ್ಯಾಂಕ್‌ನಲ್ಲಿ ಅಟೆಂಡರ್‌ನಾಗಿ ಕೆಲಸ ಮಾಡುವ ಮಹಾದೇವ ತಡಸಲ ತನ್ನ ವೇತನದಲ್ಲಿನ ಹಣದಿಂದ ಇಂತಹ ದಾಸೋಹದ ಕಾರ್ಯ ನಡೆಸುತ್ತಿರುವುದು ಅವರ ಅಭಿಮಾನ ಮೆಚ್ಚುವಂತಹದು.
ಒಂದು ಕ್ವಿಂಟಲ್‌ನಷ್ಟು ಹಾಲುಗ್ಗಿ ಹಾಗೂ ಒಂದು ಕ್ವಿಂಟಲ್‌ನಷ್ಟು ಕಿಚಡಿಯೊಂದಿಗೆ ಸಾಂಬಾರು ಉಣಬಡಿಸುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಕಾಯಕ, ಶಿಸ್ತು, ಸಮಯಪ್ರಜ್ಞೆ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕತೆ ಸಾರಿ ಹೇಳಿದ ನಾಡಿನ ದಾರ್ಶನಿಕ, ಸಂತ ಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಅನ್ನಸಂತರ್ಪಣೆ ಅವರ ನೆಚ್ಚಿನ ಸೇವೆಯಾಗಿತ್ತು. ಅದನ್ನು ಮುಂದುವರೆಸುವಲ್ಲಿ ಮಹಾದೇವ ತಡಸಲ ಶ್ರಮಿಸಿದ್ದಕ್ಕೆ ಅಭಿನಂದಿಸಿದರು.
ಇದಕ್ಕೂ ಮೊದಲು ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸುವುದರ ಮೂಲಕ ಪ್ರಸಾದಕ್ಕೆ ಚಾಲನೆ ನೀಡಲಾಯಿತು.

Previous articleನಾಲ್ವರು ಕ್ರೀಡಾ ಸಾಧಕರಿಗೆ ಮೇಜರ್ ಧ್ಯಾನ್ ​ಚಂದ್‌ ಖೇಲ್ ರತ್ನ ಪ್ರಶಸ್ತಿ
Next articleಪತಿ ದೇಹ ತುಂಡರಿಸಿದ ಪತ್ನಿ