ಪಕ್ಕದ ಮನೆ ಮಗುವನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್

0
16

ರಾಮನಗರ: ಪಕ್ಕದ ಮನೆಯ ಮಗುವನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮಂಜುನಾಥ ನಗರದ ಸಂತೋಷ ಎಂಬುವವರ 6 ವರ್ಷದ ಹೆಣ್ಣುಮಗುವನ್ನು ಪಕ್ಕದ ಮನೆಯ ದರ್ಶನ್(22) ಕಿಡ್ನಾಪ್ ಮಾಡಿ ಮಗುವಿನ ಬಾಯಿ, ಕೈ-ಕಾಲಿಗೆ ಪ್ಲಾಸ್ಟರ್ ಸುತ್ತಿ ಬಂಧಿಸಿಟ್ಟಿದ್ದು 2 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ ಎನ್ನಲಾಗಿದೆ.
ಪೋಷಕರು ಸ್ಥಳೀಯರ ಸಹಾಯದಿಂದ ಮಗುವನ್ನು ಹುಡುಕಿಕೊಂಡು ಹೋದಾಗ ರಾಮನಗರ ಬೋಳಪ್ಪನ ಕೆರೆ ಬಳಿ ಮಗು ಪತ್ತೆಯಾಗಿದ್ದು ಮಗುವಿನ ರಕ್ಷಣೆ ಮಾಡಿದ ಸ್ಥಳೀಯರು, ಬಳಿಕ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ
Next articleಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೇ ಸ್ಪರ್ಧಿಸುವೆ