ಬೆಂಗಳೂರು: ನಿಮ್ಮ ಭೇಟಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನನ್ನನ್ನು ಭೇಟಿ ಮಾಡಲು ಬರುವವರು ದಯವಿಟ್ಟು ಯಾರೂ ಶಾಲು, ಹೂ ಗುಚ್ಛ, ಹಾರ ತುರಾಯಿಗಳನ್ನು ತರಬಾರದು ಎಂದು ವಿನಂತಿಸುತ್ತೇನೆ. ಅದರ ಬದಲು ಕನ್ನಡ ಪುಸ್ತಕಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೋಟ್ ಬುಕ್ ಗಳನ್ನು ತಂದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸಬಹುದು. ನಿಮ್ಮ ಪ್ರೀತಿ, ಹಾರೈಕೆ ಮತ್ತು ಅಭಿಮಾನಕ್ಕೆ ನಾನು ಚಿರಋಣಿ ಎಂದಿದ್ದಾರೆ.