ನಮ್ಮ ಗುರಿ ಗ್ರೇಟರ್‌ ಬೆಂಗಳೂರು!

0
22

ಬೆಂಗಳೂರು: ಬೆಂಗಳೂರನ್ನು ಗ್ರೇಟರ್‌ ಬೆಂಗಳೂರು ಮಾಡುವ ಹೊಸ ದಿಕ್ಕಿನತ್ತ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಹೊಸಕೋಟೆಯಲ್ಲಿ 18500 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಗುಡಿ ಟೌನ್‌ಶಿಪ್‌ ಯೋಜನೆಯ ಕುರಿತಂತೆ ಇಂದು ಪರಿಶೀಲನೆ ನಡೆಸಿದೆ. ಬೆಂಗಳೂರನ್ನು ಗ್ರೇಟರ್‌ ಬೆಂಗಳೂರು ಮಾಡುವ ಹೊಸ ದಿಕ್ಕಿನತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಸ್ಯಾಟಲೈಟ್‌ ರಿಂಗ್‌ ರಸ್ತೆ ಸಾಗುವ ಕಡೆಗೆ ಹೊಸ ಟೌನ್‌ಶಿಪ್‌ಗಳನ್ನು ನಿರ್ಮಿಸಿ ಅಗತ್ಯ ಮೂಲಸೌಕರ್ಯ ಒದಗಿಸುವುದು, ರಸ್ತೆ, ರೈಲು ಮೊದಲಾದ ಸಂಪರ್ಕ ನೀಡುವುದು ನಮ್ಮ ಗುರಿಯಾಗಿದೆ. ಈ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ಅತ್ಯುತ್ತಮ ನಗರವಾಗಿಸುವುದು ನಮ್ಮ ಕನಸು ಎಂದಿದ್ದಾರೆ.

Previous articleಬೆಳಗಾವಿ ಕೋರ್ಟ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ
Next articleಕುವೈತ್‌ ಬೆಂಕಿ ಅವಘಡ: ಭಾರತೀಯರು ಸೇರಿ 35 ಮಂದಿ ಸಾವು