ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

0
40

ನವದೆಹಲಿ: ದೇಶದ ಸಮಸ್ತ ಜನತೆಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಗಣರಾಜ್ಯವಾಗಿ 75 ವರ್ಷಗಳ ವೈಭವವನ್ನು ಇಂದು ನಾವು ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ನಮ್ಮ ಪಯಣವು ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ ಎಂದು ಖಾತರಿಪಡಿಸಿದ ಎಲ್ಲಾ ಧೀಮಂತ ಮಹಿಳೆಯರು ಮತ್ತು ಪುರುಷರಿಗೆ ನಾವು ನಮಸ್ಕರಿಸುತ್ತೇವೆ, ಈ ಸಂದರ್ಭವು ನಮ್ಮ ಸಂವಿಧಾನದ ಆದರ್ಶಗಳನ್ನು ಸಂರಕ್ಷಿಸುವ ಹಾಗೂ ಸದೃಢ ಮತ್ತು ಸಮೃದ್ಧ ಭಾರತದತ್ತ ಕಾರ್ಯನಿರ್ವಹಿಸುವ ನಮ್ಮ ಪ್ರಯತ್ನಗಳಿಗೆ ಬಲ ನೀಡಲಿ ಎಂದಿದ್ದಾರೆ.

Previous articleನಾಡಿನ ಜನತೆಗೆ ಮುಖ್ಯಮಂತ್ರಿಯಿಂದ 76ನೇ ಗಣರಾಜ್ಯೋತ್ಸವದ ಶುಭಾಶಯ
Next articleಮೈಕ್ರೊ ಫೈನಾನ್ಸ್ ಜೊತೆ ಕೈ ಜೋಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ