ದುಷ್ಕರ್ಮಿಗಳ ಆಟಾಟೋಪಕ್ಕೆ ಸಾವಿರಾರು ರೂಪಾಯಿ ಬೆಲೆ ಬಾಳೋ ಕಾರಿನ ಗಾಜು ಪುಡಿಪುಡಿ

0
35

ಕಲಬುರಗಿ: ಮನೆ ಮುಂದೆ ನಿಲ್ಲಿಸಿದ ಕಾರ್, ಬೈಕ್, ಆಟೋಗಳಿಗೆ ದುಷ್ಕರ್ಮಿಗಳು ಕಲ್ಲೆಸದು ಸಾವಿರಾರು ರೂಪಾಯಿ ಬೆಲೆ ಬಾಳುವ ಕಾರಿನ ಗಾಜು ಪುಡಿಪುಡಿ
ಮಾಡಿದ ಘಟನೆ ಕಲಬುರಗಿ ನಗರದ ಸಂತೋಷ ಕಾಲೋನಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಹತ್ತಕ್ಕೂ ಹೆಚ್ಚು ಕಾರ್ ಆಟೋಗಳಿಗೆ ಕಲ್ಲೆಸದ ದುಷ್ಕರ್ಮಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.
ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದೆ ಕೂಡಾ ದುಷ್ಕರ್ಮಿಗಳು ಇದೇ ರೀತಿ ಕಲ್ಲೆಸದಿದ್ದ ಘಟನೆ ಜರುಗಿತ್ತು.

Previous articleಗಂಗೆಗೊಂದು ನಮಸ್ಕಾರ
Next article‘ಇಡೀ ರಾಜ್ಯಕ್ಕೆ ರಾಮುಲು ನಾಯಕರು’