ಬೆಂಗಳೂರು: ಕೋಣನಕುಂಟೆ ಬ್ಲಾಕ್ ಮಾಜಿ ಕಾರ್ಪೊರೇಟರ್ ಗಂಗಾಧರ್ ಎಂಬುವವರ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಡಿಕೆ ಸುರೇಶ್ ಆಪ್ತರ ಮೇಲೆ ಹಲವು ಐಟಿ ದಾಳಿಗಳು ಆಗಿದ್ದು, ಕಾಂಗ್ರೆಸ್ ಮುಖಂಡ ಗಂಗಾಧರ್ ಜೊತೆ ಗೊಟ್ಟಿಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಡಿ ಕೆ ಸುರೇಶ್ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿ ಹಲವಾರು ಜನರ ಮೇಲೆ ಐಟಿ ದಾಳಿ ನಡೆದಿದೆ. ಈ ಹಿನ್ನಲೆ ಕೋಣನಕುಂಟೆ, ಅಂಜಾನಪುರ ಹಾಗೂ ಅವಲಹಳ್ಳಿ ಭಾಗದಲ್ಲಿ ಬೆಳಿಗ್ಗೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸತತ 8 ಗಂಟೆಯಿಂದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಧರಣಿ ನಡೆಸಿದ್ದಾರೆ.