Home Advertisement
Home ಅಪರಾಧ ಜೈಲಲ್ಲಿ ನಡತೆ ಬದಲಿಸಿಕೊಂಡ ದರ್ಶನ್

ಜೈಲಲ್ಲಿ ನಡತೆ ಬದಲಿಸಿಕೊಂಡ ದರ್ಶನ್

0
126

ಬಳ್ಳಾರಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಟಿವಿ ಸಿಕ್ಕಿದ್ದಕ್ಕೋ? ತಾಯಿ, ಸಹೋದರಿ, ಸ್ನೇಹಿತರು ಭೇಟಿ ಮಾಡಿದ್ದ ಕಾರಣಕ್ಕೋ ಏನೋ ಜೈಲಿನಲ್ಲಿ ತಮ್ಮ ನಡತೆಯನ್ನೇ ಬದಲಿಸಿಕೊಂಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಇಲ್ಲಿನ ಸೆಂಟ್ರಲ್ ಜೈಲಿಗೆ ಸ್ಥಳಾಂತರವಾದಾಗಿನಿಂದಲೂ ದರ್ಶನ್ ಒಂದಲ್ಲ, ಒಂದು ಕಿರಿಕ್ ಮಾಡಿಕೊಳ್ಳುತ್ತಿದ್ದರು. ಸಿಬ್ಬಂದಿ ಜತೆ ಮಾತನಾಡುವಾಗಲೂ, ಯಾವುದಾದರೂ ಸೌಲಭ್ಯ ಕೇಳುವಾಗಲೂ ದರ್ಶನ್ ರೇಗಾಡುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ದರ್ಶನ್ ಫುಲ್ ಖುಷಿಯ ಮೂಡ್‌ಗೆ ಜಾರಿದ್ದಾರೆ. ತಮ್ಮ ಸಂಬಂಧಿಗಳು ಭೇಟಿಗೆ ಆಗಮಿಸಿದಾಗ ತುಂಬ ಗಂಭೀರವಾಗಿಯೇ ಇರುತ್ತಿದ್ದ ದರ್ಶನ್ ಈಗ ಸ್ವತಃ ಬದಲಾವಣೆಯಾಗಿದ್ದಾರೆ. ಎಲ್ಲರೊಂದಿಗೆ ನಗುತ್ತಲೇ ಮಾತನಾಡುತ್ತಿದ್ದು, ಸಿಬ್ಬಂದಿ ಜತೆಗೂ ಸೌಮ್ಯವಾಗಿಯೇ ವರ್ತನೆ ಮಾಡುತ್ತಿದ್ದಾರೆ.
ಚಿಕನ್ ಊಟ: ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಬಂಧಿಯಾಗಿರುವ ದರ್ಶನ್‌ಗೆ ಶುಕ್ರವಾರ ಜೈಲು ಮೆನು ಪ್ರಕಾರ ಚಪಾತಿ-ಚಿಕನ್ ಊಟ ನೀಡಲಾಯಿತು. ಚಪಾತಿ, ೨೦೦ ಗ್ರಾಂ ಚಿಕನ್, ಅನ್ನ ಸಾಂಬಾರ್, ಮಜ್ಜಿಗೆ ನೀಡಲಾಗಿದೆ. ಊಟ ನಿರಾಕರಿಸದೆಯೇ ಎಲ್ಲರಂತೆ ಊಟ ಸವಿದು ವಾಕ್ ಮಾಡಿದ್ದಾರೆ. ದರ್ಶನ್‌ಗೆ ವಕೀಲರೊಬ್ಬರು ಬರೆದಿದ್ದ ಪತ್ರ ತೀವ್ರ ಬದಲಾವಣೆ ತಂದಂತೆ ಕಾಣುತ್ತಿದೆ. ಜೈಲಿನಲ್ಲಿ ತಮ್ಮ ನಡತೆಯನ್ನು ಬದಲಿಸಿಕೊಳ್ಳಿ ಎಂದು ಬರೆದಿದ್ದ ವಕೀಲರ ಸಂದೇಶದಿಂದಾಗಿ ದರ್ಶನ್ ದಿನೇ ದಿನೇ ಸುಧಾರಣೆಯತ್ತ ಸಾಗುತ್ತಿದ್ದಾರೆ ಎನ್ನಲಾಗುತ್ತಿದೆ.

Previous articleಈಗಿನ ಸಿಎಂಗೆ ನಾವೇ ಹೆದರಿ ಮನೆ ಬಾಗಿಲಿಗೆ ನಿಲ್ಲುವ ಸ್ಥಿತಿಯಿದೆ
Next articleನಿರ್ಬಂಧ ಆದೇಶ ತಪ್ಪು: ಶಹಾಪುರಕ್ಕೆ ಬರುತ್ತೇನೆಂದ ಸಿದ್ದಲಿಂಗಶ್ರೀ