ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕಾಗಿ ಹಲ್ಲೆ ಮಾಡಿದ ಮತಾಂಧರು

0
12
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೈ ಶ್ರೀರಾಮ್ ಎನ್ನುವಂತಿಲ್ಲ ಅನ್ನುವಂತಹ ದುಸ್ಥಿತಿಗೆ ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು ದೂಡಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹನುಮ ಜನ್ಮಸ್ಥಳದಲ್ಲಿ ಹನುಮ ಜಯಂತಿಯ ದಿನವಾದರೂ ಹಿಂದೂಗಳು ಜೈ ಶ್ರೀರಾಮ್ ಎನ್ನುವಂತಿಲ್ಲ. ಅಂತಹ ದುಸ್ಥಿತಿಗೆ ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು ದೂಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀರಾಮನಗರದಲ್ಲಿ ಹಿಂದೂ ಯುವಕ ಕುಮಾರ್ ರಾಠೋಡ್ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾನೆ. ಈ ವೇಳೆ ಅಲ್ಲಿದ್ದ 20 ಮುಸ್ಲಿಂ ಯುವಕರು ಸೇರಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕಾಗಿ ಹಲ್ಲೆ ಮಾಡಿದ ಮತಾಂಧರು, ಬಳಿಕ ಜಾತಿ ಹೆಸರಿಡಿದು ನಿಂದಿಸಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯ ಸಾಬ್, ಕರ್ನಾಟಕವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಹುನ್ನಾರವನ್ನೇನಾದರೂ ಹಾಕಿಕೊಂಡಿದ್ದೀರೋ? ಎಂದು ಪ್ರಶ್ನಿಸಿದೆ.

Previous articleಕ್ಷಣ ಕ್ಷಣದಲ್ಲೂ, ಒಳಹೊರಗೂ ಭಗವಂತನಿದ್ದಾನೆ
Next articleಮೋದಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..?