ಜೆಪಿಸಿ ಸಭೆ ಅದೊಂದು ನಾಟಕದ ಕಂಪನಿ

0
23

ಹುಬ್ಬಳ್ಳಿ: ಜೆಪಿಸಿ ಸಭೆ ಅದೊಂದು ನಾಟಕದ ಕಂಪನಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಪಿಸಿ ಇದೊಂದು ನಾಟಕದ ಕಂಪನಿ ಎಂದು ವ್ಯಂಗ್ಯವಾಡಿ, ಜೆಪಿಸಿ ಅಂದರೆ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ. ಅದಕ್ಕೊಂದು ಲೆಕ್ಕವಿದೆ. ಅವರು ರಾಜ್ಯಕ್ಕೆ ಬರಬೇಕು ಎಂದರೆ ಸರಕಾರಕ್ಕೆ, ಅಧಿಕಾರಿಗಳಿಗೆ ತಿಳಿಸಬೇಕು. ಅದರಲ್ಲಿನ ಸದಸ್ಯರೆಲ್ಲರು ಬರಬೇಕು. ಒಬ್ಬರು ಅಧ್ಯಕ್ಷರು ಬಂದಿದ್ದಾರೆ. ಅವರ ಪಕ್ಷದ ಕೆಲಸಕ್ಕೆ ಬಂದಿದ್ದಾರೆ ಎಂದರು.
ಒಬ್ಬರು ಸಂಸದರನ್ನು ಕರೆದುಕೊಂಡು ಬಂದಿದ್ದಾರೆ. ಅದರಲ್ಲಿ ಬಸವರಾಜ ಬೊಮ್ಮಾಯಿ ಏನಾದರೂ ಸದಸ್ಯರು ಆಗಿದ್ದಾರಾ?, ಸಚಿವ ವಿ.ಸೋಮಣ್ಣ ಮೆಂಬರ್ ಆಗಿದ್ದಾರಾ? ಸೋಮಣ್ಣ ಒಬ್ಬರು ಮಂತ್ರಿ. ಒಬ್ಬ ಮಂತ್ರಿ ಜೆಪಿಸಿಯಲ್ಲಿ ಇರೋಕೆ ಆಗಲ್ಲ. ಅವರು ಬಂದು ಜನರ ಹತ್ತಿರ ಅರ್ಜಿ ತೆಗೆದುಕೊಂಡಿದ್ದಾರೆ. ಜನರೆದುರು ಪ್ರಚಾರ ಮಾಡಬೇಕು ಎಂದು ಬಂದಿದ್ದಾರೆ ಎಂದರು.

Previous articleಸಿದ್ದರಾಮಯ್ಯ ‌ಕುರುಬರಿಗೆ ಮಾತ್ರ ಯೋಜನೆಗಳನ್ನು ಜಾರಿ‌ ಮಾಡಿಲ್ಲ
Next articleಸಿಎಂ‌ ಸಿದ್ದರಾಮಯ್ಯಗೆ ಕುರಿ ಮರಿ, ಕಂಬಳಿ ಗಿಫ್ಟ್